ಓಡಬಾಯಿಯಲ್ಲಿ ಕಾರು – ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತ್ಯು

0

ಸುಳ್ಯದ ಓಡಬಾಯಿಯಲ್ಲಿ ಜು. 31 ರಂದು ರಾತ್ರಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್‌ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆ.01 ರಂದು ನಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಲವಕುಮಾರ್ ಬಾರೆತ್ತಡ್ಕ ಅವರನ್ನು ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ್ ರವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಬಳಿಕ ಲೈಫ್ ಕೇರ್ ಆಂಬ್ಯುಲೆನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಎ. ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅಲ್ಲಿ ಅವರು ಚಿಕಿತ್ಸೆ ಫಲಿಸದೇ ಆ.1 ರಂದು ರಾತ್ರಿ ಮೃತಪಟ್ಟರೆನ್ನಲಾಗಿದೆ.
ಕಾರನ್ನು ಐವರ್ನಾಡು ಗ್ರಾಮದ ಚೆಮ್ನೂರು ಕುಸುಮಾಧರ ಎಂಬವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇವರಿಗೆ 28 ವರ್ಷ ಪ್ರಾಯವಾಗಿದ್ದು ಮೃತರು ತಂದೆ ಶೇಷಪ್ಪ ಗೌಡ, ತಾಯಿ ಶಿವಮ್ಮ, ಸಹೋದರ ಯಶವಂತರನ್ನು ಅಗಲಿದ್ದಾರೆ.