ಕೇರ್ಪಳ ಪಯಸ್ವಿನಿ ಯುವಕ ಮಂಡಲದಿಂದ ವನಮಹೋತ್ಸವ ಆಚರಣೆ

0

ಪರಿಸರ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ : ರಾಘವೇಂದ್ರ ಪ್ರಸಾದ್

ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ ವನಮಹೋತ್ಸವ ದಿನಾಚರಣೆ ನಡೆಯಿತು.

ಪಯಸ್ವಿನಿ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮೀಶ್ ದೇವರಕಳಿಯ ಅಧ್ಯಕ್ಷತೆ‌ ವಹಿಸಿದ್ದರು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುಮತಿ, ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಶಿವಪ್ರಸಾದ್ ಕೇರ್ಪಳ, ಯುವಕ ಮಂಡಲದ ಕಾರ್ಯದರ್ಶಿ ಅಜಿತ್ ಕುರುಂಜಿ, ಕೋಶಾಧಿಕಾರಿ ಜಿತೇಶ್ ಕೊಡೆಂಚಿಕಾರ್, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಕೇರ್ಪಳ, ಕಮಲಾಕ್ಷ ಕೇರ್ಪಳ, ಭರತ್ ಕುರುಂಜಿ, ಮೋಹನ್ ಕೇರ್ಪಳ, ಜಯಪ್ರಕಾಶ್ ಕೇರ್ಪಳ, ಶಾಲಾ ಮುಖ್ಯೋಪಾಧ್ಯಾಯಿನಿ ಹೊನ್ನಮ್ಮ, ಶೋಭಾ ಟೀಚರ್ ‌ಮೊದಲಾದವರಿದ್ದರು.

ಸುಳ್ಯ ಅರಣ್ಯ‌ಇಲಾಖೆಯ ವಲಯಾರಣ್ಯಾಧಿಕಾರಿ ರಾಘವೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿ, ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.