ಜೇಸಿಐ ಸುಳ್ಯ ಸಿಟಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ‘ಆಟಿ ಕೂಟ – ಆಟಿ ಗಮ್ಮತ್’

0

ಹಿರಿಯ ಕ್ರೀಡಾಪಟು ರಾಮಯ್ಯ ಮಾದನಮನೆಯವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ

ಜೇಸಿಐ ಸುಳ್ಯ ಸಿಟಿ ಮತ್ತು
ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸಿಟ್ಯೂಟ್ ಸುಳ್ಯ, ” ಗ್ಲೋಬಲ್ ಕಂಪ್ಯೂಟರ್ & ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆ, ಸುಳ್ಯ ಕಲರ್ಸ್ ಗಾರ್ಮೆಂಟ್ಸ್ ಹೊಲಿಗೆ ತರಬೇತಿ ಕೇಂದ್ರ, ಸುಳ್ಯ ಇವರ ಸಹಯೋಗದಲ್ಲಿ ಆಟಿಕೂಟ
ಸುಳ್ಯದ ಅಂಬಟೆಡ್ಕದ
ವರ್ತಕರ ಸಮುದಾಯ ಭವನದಲ್ಲಿ ಆ. 15 ರಂದು ನಡೆಯಿತು.

ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ ಶ್ರೀಮತಿ ನಾಗವೇಣಿ ದಾಮೋದರ ಕೋರಡ್ಕ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅರೆಭಾಷೆ
ಅಕಾಡೆಮಿ ಮಾಜಿ ಸದಸ್ಯ ಯಶವಂತ ಕುಡೆಕಲ್ಲು ಆಟಿ ಕುರಿತು ಮಾತನಾಡಿ ಶುಭ ಹಾರೈಸಿದರು. ಅತಿಥಿಗಳಾಗಿ ಜೇಸಿ ವಲಯ ಸಂಯೋಜಕರಾದ ಪ್ರದೀಪ್ ಕುಮಾರ್ ರೈ, ವಿಷ್ಣುಪ್ರಕಾಶ್ ನಾರ್ಕೋಡು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಲರ್ಸ್ ಗಾರ್ಮೆಂಟ್ಸ್ ಮಾಲಕಿ ಶ್ರೀಮತಿ ರಜನಿ ಶುಭಕರ, ಗ್ಲೋಬಲ್ ಕಂಪ್ಯೂಟರ್ ನ
ತೇಜಾಕ್ಷಿ ನಂದಕುಮಾರ್,
ಸಿಟಿ ಜೇಸಿ ಕಾರ್ಯದರ್ಶಿ
ತೇಜಸ್ವಿನಿ ಪ್ರಕಾಶ್,ಸಂಯೋಜಕ
ಸುನಿಲ್ ಆರಂಬೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ರಾಮಯ್ಯ ಮಾದನಮನೆಯವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು.

ರಂಜಿತ್ ಜೇಸಿವಾಣಿ ವಾಚಿಸಿದರು. ಶ್ರೀಮತಿ ಉಮಾ ಸನ್ಮಾನ ಪತ್ರ ವಾಚಿಸಿದರು. ಭಾಗವಹಿಸಿದ ಎಲ್ಲರಿಗೂ ಆಟಿ ಗಮ್ಮತ್ ಇತ್ತು.