














ಸ. ಹಿ. ಪ್ರಾ. ಶಾಲೆ ಮೊಗ್ರ. ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಧ್ವಜಾರೋಹಣ ನೆರವೇರಿಸಿದರು.. ಬಳಿಕ ಸಭಾ ಕಾರ್ಯಕ್ರಮ ಜರುಗಿದ್ದು ಮುಖ್ಯ ಅತಿಥಿಗಳಾಗಿ ದೇವಿಪ್ರಸಾದ್ ಚಿಕ್ಮುಳಿ. ಜಯಪ್ರಕಾಶ್ ಮೊಗ್ರ ಶುಭಹಾರೈಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಲಕ್ಷ್ಮೀ , ಗ್ರಾ.ಪಂ ಮಾಜಿ ಸದಸ್ಯೆ ಶಾರದಾ, ಮುಖ್ಯ ಶಿಕ್ಷಕ ಪರಶಿವಮೂರ್ತಿ ಕೆ ಎಂ, ಉಪಸ್ಥಿತರಿದ್ದರು. ಶುಭಲತಾ ವಂದನಾರ್ಪಣೆ ಮಾಡಿದರು.. ಶ್ರೀಮತಿ ರಮ್ಯಾ ಪಿ ಆರ್ ಕಾರ್ಯಕ್ರಮ ನಿರೂಪಿಸಿದರು.







