














ಸುಬ್ರಹ್ಮಣ್ಯ ಪಕ್ಕದ ಏನೆಕಲ್ಲು ಪರಿಸರದಲ್ಲಿ ಆ.25 ರರಂದು ಸುರಿದ ಭಾರಿ ಮಳೆಯಿಂದಾಗಿ ಏನೆಕಲ್ಲು ಸಂಪರ್ಕಿಸುವ ಮಧುವನ- ಕಲ್ಲಾಜೆಯಲ್ಲಿ ಮೋರಿ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ. ಸುಬ್ರಮಣ್ಯ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೋಹನ ಕೋಟಿ ಗೌಡನ ಮನೆ ಸ್ಥಳೀಯ ನಿವಾಸಿ ಶ್ರೀ ಕೃಷ್ಣ ಕೋಟೆ ಶೋಭರಾಜ್, ಸುಜಿತ್ ,ಹರೀಶ ಕೋಟಿ ಗೌಡನ ಮನೆ ಮತ್ತಿತರರು ಸೇರಿ ಮುನ್ನೆಚ್ಚರಿಕೆಯಾಗಿ ರಸ್ತೆಯಲ್ಲಿ ಎರಡೂ ಬದಿಯಿಂದ ಹೋಗದ ಹಾಗೆ ಅಲ್ಲಿ ತಡೆಯನ್ನ ತಾತ್ಕಾಲಿಕವಾಗಿ ಹಾಕಿರುವುದಾಗಿ ತಿಳಿದು ಬಂದಿದೆ







