ಜೇಸಿಐ ಸುಳ್ಯ ಸಿಟಿಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ

0

ಆಟೋ ರಿಕ್ಷಾ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಣೆ

ಜೇಸಿಐ ಸುಳ್ಯ ಸಿಟಿ ವತಿಯಿಂದ ವಲಯಧ್ಯಾಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಸುಳ್ಯದ ಪರಿವಾರಕಾನದಲ್ಲಿರುವ ಉಡುಪಿ ಗಾರ್ಡನ್‌ನ ಗ್ರ್ಯಾಂಡ್ ಪರಿವಾರ್ ಸಭಾಭವನದಲ್ಲಿ ಆ. 29 ರಂದು ನಡೆಯಿತು. ಆರಂಭದಲ್ಲಿ ಹಳಗೇಟಿನಿಂದ ವಲಯಾಧ್ಯಕ್ಷರೊಂದಿಗೆ ವಾಹನ ಜಾಥ ನಡೆದು ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಆಟೋ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮ ನಡೆಯಿತು. ಬಳಿಕ ಡಾ ಕುರುಂಜಿ ವೆಂಕಟ್ರಮಣ ಗೌಡರ ಪುತ್ತಳಿಗೆ ಪುಷ್ಪ ನಮನ ಕಾರ್ಯಕ್ರಮ ನಡೆಯಿತು.

ಉಡುಪಿ ಗಾರ್ಡನ್‌ನ ಗ್ರ್ಯಾಂಡ್ ಪರಿವಾರ್ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ ಜೆಎಫ್ಎಂ ನಾಗವೇಣಿ ದಾಮೋದರ ಕೋರಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15 ಇದರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಜೇಸಿಐ ಭಾರತ ಪ್ರಾಂತ್ಯ ‘ಡಿ’ ವಲಯ 15 ಇದರ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ವಲಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಲೂಯಿಸ್ ಮೆಸ್ಕರೇನಸ್, ವಲಯ ಸಂಯೋಜಕ ವಿಷ್ಣುಪ್ರಕಾಶ್ ನಾರ್ಕೋಡು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆಯವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಇತ್ತೀಚಿಗೆ ಚೆನ್ನೈಯಲ್ಲಿ ನಡೆದ ಮೂರನೇ ಗಿನ್ನಿಸ್ ವಿಶ್ವ ದಾಖಲೆಯ ಕರಾಟೆಯಲ್ಲಿ ಭಾಗಿಯಾದ ಜೇಸಿಐ ಸುಳ್ಯ ಸಿಟಿಯ ಪೂರ್ವಾಧ್ಯಕ್ಷ ಚಂದ್ರಶೇಖರ ಕನಕಮಜಲು ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ನಿರ್ದೇಶಕ ನಿಖಿಲ್ ಮಡ್ತಿಲ, ಕಾರ್ಯದರ್ಶಿ ತೇಜಸ್ವಿನಿ ನಾರ್ಕೊಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನನಿ ಕೋರಡ್ಕ ಜೇಸಿವಾಣಿ ವಾಚಿಸಿದರು. ಮನಸ್ವಿ ಪ್ರಾರ್ಥಿಸಿದರು.