ಸುಳ್ಯ ಗುರು ರಾಘವೇಂದ್ರ ಮಠದಲ್ಲಿ ರಾಯರ 355 ನೇಆರಾಧನಾ ಮಹೋತ್ಸವ

0

ಮಧ್ಯಾಹ್ನ ರಾಯರಿಗೆ ಪವಮಾನಾಭಿಷೇಕ ಮಹಾಮಂಗಳಾರತಿ- ಮಹಾಪೂಜೆ

ಸಂಧ್ಯಾಕಾಲದಲ್ಲಿ ರಾಯರಿಗೆ ಅಷ್ಟವಧಾನ ತೊಟ್ಟಿಲ ಸೇವೆ ವಿಶೇಷ ಕಾರ್ಯಕ್ರಮ

ಸುಳ್ಯದ ಜೀವನದಿ ಪಯಸ್ವಿನಿ ನದಿ ತಟದಲ್ಲಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆ.30 ರಂದು ಶ್ರೀ ಗುರು ರಾಯರ ಆರಾಧನಾ ಮಹೋತ್ಸವವು ಮಠದ ಪುರೋಹಿತರಾದ ಬ್ರಹ್ಮಶ್ರೀ ವೇದಮೂರ್ತಿ ಶ್ರೀಹರಿ ಎಳಚಿತ್ತಾಯ ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕಕಾರ್ಯಕ್ರಮಗಳೊಂದಿಗೆ ನಡೆಯಿತು.

ಪೂರ್ವಾಹ್ನ ಅರ್ಚಕರಾದ ರವಿರಾಜ ನಾವಡ ರವರ ನೇತೃತ್ವದಲ್ಲಿಮಹಾಗಣಪತಿ ಹೋಮವಾಗಿ ಬಳಿಕ ಪವಮಾನ ಹೋಮ, ಪವಮಾನಾಭಿಷೇಕ,
ಮಧ್ಯಾಹ್ನ ರಾಯರಿಗೆ ವಿಶೇಷಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ನಂತರ. ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಿ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು.ಬೆಳಗ್ಗೆಶ್ರೀಗುರುರಾಘವೇಂದ್ರ ಮಕ್ಕಳ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮವು ನಡೆಯಿತು.

ಇಂದು ಸಂಧ್ಯಾಕಾಲದಲ್ಲಿ ರಾಯರಿಗೆ ವಿಶೇಷವಾಗಿ ಅಷ್ಟವಧಾನ ಹಾಗೂ ಪಲ್ಲಕ್ಕಿ ಸೇವೆ ,ತೊಟ್ಟಿಲು ಸೇವೆಯು ನಡೆಯಲಿದೆ. ಈ ಸಂದರ್ಭದಲ್ಲಿ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾದ ಶ್ರೀ ಕೃಷ್ಣ ಸೋಮಯಾಗಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ರಾಯರ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡರು.