
ಗುತ್ತಿಗಾರಿನಲ್ಲಿರುವ ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ నిధి లిమిಟೆಡ್ಸ್ಸಂ ಸ್ಥೆಯ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ದಿ ಗುತ್ತಿಗಾರು ತೆರಿಗೆ ಪಾವತಿದಾರರ ಹಾಗೂ ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ ಆ.29 ರಂದು ನಡೆಯಿತು.














ದೇವಿ ಸಿಟಿ ಕಾಂಪ್ಲೆಕ್ಸ್ ನ ಚಿಕ್ಕುಳಿ ಸಭಾಭವನ ದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಆಲ್ವಿನ್ ಜೋಯಲ್ ನೊರೊನ್ಹಾ ವಹಿಸಿದ್ದರು.
ಅತಿಥಿಗಳಾಗಿ ಸುಬ್ರಹ್ಮಣ್ಯ ಠಾಣೆಯ ಠಾಣಾಧಿಕಾರಿ ಎಸ್ ಐ ಆಂಜನೇಯ ರೆಡ್ಡಿ , ದೊಡ್ಡಣ್ಣ ಗೌಡ ಚಿಕ್ಮುಳಿ, ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ నిధి లిమిಟೆಡ್ಸ್ ಗುತ್ತಿಗಾರು ಇದರ ಅಧ್ಯಕ್ಷ ಸೀತಾರಾಮ ಗೌಡ, ಉಪಾಧ್ಯಕ್ಷ ಮನೋಹರ ಎಚ್.ಎಸ್, ತುಳು ನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೊಗೀಶ್ , ಸತೀಶ್ ನಾಯಕ್,
ಸಂಸ್ಥೆಯ ಮೆನೇಜರ್ ನಿಖಿತಾ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರುಗಳಾದ ಶಿವಪ್ರಕಾಶ್ ಅಡ್ಡನಪಾರೆ, ಮಣಿಕಂಠ ಕೊಳಗೆ, ಧನಲಕ್ಷ್ಮೀ, ತುಳಸಿ ಕೇಮಳ, ಧರ್ಮಪಾಲ ಅಡ್ಡನಪಾರೆ, ಕ್ಷಮಂತ್ ಕೆ.ಪಿ, ಜಯರಾಮ ಅಡ್ಡನಪಾರೆ, ಯೋಗೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ, ಸಂಘಟಕ ಶಿವರಾಮ ಏನೆಕಲ್ಲು, ನಿವೃತ್ತ ಯೋಧ ಭಾಸ್ಕರ ಕೇಮಟಿ , ಗುತ್ತಿಗಾರು ಭಾಗದಲ್ಲಿ ಜನಪ್ರಿಯ ವೈದ್ಯ ಡಾ. ಉದಯಕುಮಾರ್ ಕೂಜುಗೋಡು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಾಗೇ ಲೀಲಾವತಿ ಎಂಬವರ ಆರೋಗ್ಯ ವ್ಯವಸ್ಥೆಗಾಗಿ ಸಹಾಯಧನ ಹಸ್ತಾಂತರಿಸಲಾಯಿತು.
ಸೀತಾರಾಮ ಗೌಡ ಸ್ವಾಗತಿಸಿ, ವಿ.ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.







