ದುಗ್ಗಪ್ಪ ಗೌಡ ಬಜಂತಡ್ಕ ಮಡ್ತಿಲ ರವರಿಗೆ ಶ್ರದ್ಧಾಂಜಲಿ, ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ಬಜಂತಡ್ಕ ಮಡ್ತಿಲ ದುಗ್ಗಪ್ಪ ಗೌಡರವರು ಆ.14 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಆ.30 ರಂದು ಬಜಂತಡ್ಕ ಮನೆಯಲ್ಲಿ ನಡೆಯಿತು.
ದಿನೇಶ್ ಮಡ್ತಿಲರವರು ದಿ.ದುಗ್ಗಪ್ಪ ಗೌಡರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು. ಆಗಮಿಸಿದ ನೂರಾರು ಜನರು ದಿ.ದುಗ್ಗಪ್ಪ ಗೌಡರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಲಕ್ಷ್ಮೀ,ಪುತ್ರರಾದ ನಿವೃತ್ತ ಯೋಧ ಗಣೇಶ ಬಜಂತಡ್ಕ,ಪ್ರವೀಣ ಬಜಂತಡ್ಕ, ಪುತ್ರಿ ಶ್ರೀಮತಿ ಅನಿತ,ಅಳಿಯ ಹಾಗೂ ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದರು
.