ಉಬರಡ್ಕ‌ ಮಿತ್ತೂರು ಪ್ರಾ.ಕೃ. ಪತ್ತಿನ ಸಹಕಾರ ಸಂಘದ ಮಹಾಸಭೆ

0

64 ಲಕ್ಷ ಲಾಭ ಶೇ.9 ಡಿವಿಡೆಂಡ್

ಉಬರಡ್ಕ‌ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಇವರ ಅಧ್ಯಕ್ಷತೆಯಲ್ಲಿ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ಆ.30 ರಂದು ನಡೆಯಿತು.

ಸಂಘವು ಸುಮಾರು ರೂ.180.77 ಕೋಟಿ ವ್ಯವಹಾರ ಹೊಂದಿದ್ದು, ರೂ.64 ಲಕ್ಷ ಲಾಭ ಪಡೆದಿದೆ. ಶೇ.9 ಡಿವಿಡೆಂಡ್ ನೀಡಲಾಯಿತು.

ಮೊದಲಿಗೆ ಶೇ.8 ಡಿವಿಡೆಂಡ್ ಇಟ್ಟಿದ್ದು, ಇದನ್ನು ಹೆಚ್ಚು ಮಾಡಬೇಕು ಎಂದು ರತ್ನಾಕರ ಗೌಡ ಬಳ್ಳಡ್ಕ ಮತ್ತು ಮತ್ತು ಸರ್ವಸದಸ್ಯರು ಹೇಳಿದರು. ಇದರಂತೆ ಶೇ.9 ಕ್ಕೆ ಆಡಳಿತ ಮಂಡಳಿ ಹೆಚ್ಚಳ ಮಾಡಿದರು. ಕೃಷಿ ಸಾಲದ ಬಗ್ಗೆ ಸಭೆ ಕರೆದು ಮಾತನಾಡುವುದೆಂದು ತೀರ್ಮಾನಿಸಲಾಯಿತು. ವರದಿ ವರ್ಷದಲ್ಲಿ ಮೃತಪಟ್ಟ ಸದಸಸ್ಯರುಗಳ ಹೆಸರು ಓದಿ ಹೇಳಿ ಸಂತಾಪ ಸೂಚಿಸಲಾಯಿತು. ಸಂಘದ ಕಾರ್ಯಕ್ಷೇತ್ರಕ್ಕೊಳಪಟ್ಟ ಉಬರಡ್ಕ‌ಮಿತ್ತೂರು ಸ.ಹಿ.ಪ್ರಾ ಶಾಲೆಯಲ್ಲಿ ಧೃತಿಕಾ ಎಂ.ಎಚ್, ರಕ್ಷಿತಾ ಪಿ.ಆರ್., ಅಮೈಮಡಿಯಾರು ಹಿ.ಪ್ರಾ ಶಾಲೆಯ ರೋಕ್ಷಿತ್ ಕೆ.ವಿ, ಹರ್ಷಿತಾ ಪಿ, ಕೊಡಿಯಾಲಬೈಲು ಕಿ.ಪ್ರಾ ಶಾಲೆಯ ಆಧ್ಯಂತ್, ಸೌಜನ್ಯ ಕೆ., ಹಾಗೂ ಮಹಾತ್ನಗಾಂಧಿ ಮಲ್ನಾಡ್ ಪ್ರೌಢ ಶಾಲೆಯ ರಿಕಿತಾ ಪಿ.ಬಿ, ಪ್ರಥಮ್ ಬಿ.ಆರ್. ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘಕ್ಕೆ ಮರಣ ಸಾಂತ್ವನ ನಿಧಿಗೆ ಶ್ರೀಮತಿ ವೆಂಕಮ್ಮ ರಾಮಣ್ಣ ಗೌಡ ಮಾಣಿಬೆಟ್ಟು ಸ್ಮರಣಾರ್ಥ ರೂ.30,000/-, ಶೇಷಪ್ಪ ಗೌಡ ಮದುವೆಗದ್ದೆ ಸ್ಮರಣಾರ್ಥ ರೂ.50000/-, ಈಶ್ವರಪ್ಪ ಗೌಡ ಪಾನತ್ತಿಲ ಸ್ಮರಣಾರ್ಥ ರೂ.50005/-, ಶ್ರೀಮತಿ ರಾಧಾ ನಾರಾಯಣ ನಾಯಕ್ ಸ್ಮರಣಾರ್ಥ ರೂ.25000/-, ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಆರೋಗ್ಯ ಕಾರ್ಯಕರ್ತೆಯಾಗಿದ್ದು ನಿವೃತ್ತರಾದ ಶ್ರೀಮತಿ ರೇವತಿ ಮಡಿಯಾರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವಾರ್ಷಿಕ ವರದಿಯನ್ನು ವಾಚಿಸಿದರು. ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಸ್ವಾಗತಿಸಿ ಮಾತನಾಡಿದರು.
ಪುಟಾಣಿಗಳಾದ ಧೃತಿಕಾ, ರಕ್ಷಿತಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ವಂದಿಸಿದರು.

ಸಂಘದ ನಿರ್ದೇಶಕರುಗಳಾದ ಗಂಗಾಧರ ಪಿ.ಎಸ್, ರಾಜೇಶ್ ನೆಕ್ಕಿಲ, ಹರೀಶ ಎಂ.ಎಸ್, ಸುರೇಶ್ ಎಂ.ಎಚ್, ಪ್ರಭಾಕರ ಅಮೈ, ಗಂಗಾಧರ ಕೆ., ಈಶ್ವರ ಆರ್. ಕಲ್ಚಾರ್, ಪದ್ಮಯ್ಯ ನಾಯ್ಕ್ ಸಿ., ಶ್ರೀಮತಿ ವನಿತಾ ಎಂ., ಶ್ರೀಮತಿ ಕೀರ್ತಿ ಬಿ.ಕೆ., ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎಂ, ಶ್ರೀಮತಿ ರಮ್ಯ ಕೆ.ಆರ್, ಕೆ.ಗುರುವ, ದರ್ಶನ್ ಎನ್, ಜಯರಾಮ ಹೆಚ್.ಎಂ ಸಹಕರಿಸಿದರು.