ಪ್ರಯಾಣಿಕರ ಪರದಾಟ















ಇಂದು ಬೆಳಿಗ್ಗೆ (ಆ. 31ರಂದು) ಬೆಳ್ಳಾರೆ ಪೆರ್ಲಂಪಾಡಿ ಕಡೆಗೆ ಸಂಚರಿಸುವ ಸರಕಾರಿ ಬಸ್ ಶೇಣಿಯಲ್ಲಿ ರಸ್ತೆ ಬದಿಗೆ ಸರಿದು ಅದರ ಚಕ್ರ ಮೆಸ್ಕಾಂ ಅಂಡರ್ ಗ್ರೌಂಡ್ ಕೇಬಲ್ ಹಾಕಿದ ಕಣಿಯಲ್ಲಿ ಹೂತು ಹೋತ ಪರಿಣಾಮವಾಗಿ ಬಸ್ಸಲ್ಲಿದ್ದ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.
ಎಲಿಮಲೆಯಿಂದ ಪೈಲಾರು – ಚೊಕ್ಕಾಡಿ – ಬೆಳ್ಳಾರೆ – ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಹೋಗುವ ಈ ಬಸ್ಸಿನಲ್ಲಿ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಹೋಗುವ ಪ್ರಯಾಣಿಕರೇ ಹೆಚ್ಚಾಗಿ ಇರುತ್ತಾರೆ. ಇವತ್ತು ಬೆಳಿಗ್ಗೆ ಈ ಘಟನೆ ನಡೆದಿದ್ದು, ಬಸ್ಸನ್ನು ಮೇಲಕ್ಕೆತ್ತಲು ಕ್ರೇನ್ ಬರಬೇಕಾದ ಕಾರಣ ಪ್ರಯಾಣಿಕರು ಕೆಳಗಿಳಿದು ಪ್ರಯಾಣಕ್ಕೆ ಬೇರೆ ದಾರಿ ಅನುಸರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಪರ್ಲಂಪಾಡಿ ಮೂಲಕ ಪುತ್ತೂರಿಗೆ ಸಂಚರಿಸುವ ಏಕೈಕ ಬಸ್ ಇದಾಗಿದ್ದು, ಆ ಭಾಗದ ಪ್ರಯಾಣಿಕರೂ ಬೇರೆ ದಾರಿ ಅನುಸರಿಸುವ ಅನಿವಾರ್ಯ ಎದುರಾಗಿದೆ. ಈ ರಸ್ತೆಯ ದುರವಸ್ಥೆಯ ಬಗ್ಗೆ ಆ. 30ರಂದು ಸುದ್ದಿ ವೆಬ್ಸೈಟ್ ನಲ್ಲಿ ವರದಿ ಪ್ರಕಟಗೊಂಡಿತ್ತು.







