ಜೇಸಿಐ ಸುಳ್ಯ ಸಿಟಿ ವತಿಯಿಂದ ಎಂ.ಬಿ ಸದಾಶಿವರಿಗೆ ಇನ್‌ಸ್ಪೈಯರ್ ಅವಾರ್ಡ್ ಪ್ರದಾನ

0

ಮಾನವೀಯ ಕಾರ್ಯಗಳಿಗೆ ಜೇಸೀಯೇ ಶಕ್ತಿ : ಎಂ.ಬಿ.

ಜೇಸಿಐ ಸುಳ್ಯ ಸಿಟಿ ವತಿಯಿಂದ ಇನ್‌ಸ್ಪೈಯರ್ ಅವಾರ್ಡ್ ಪ್ರದಾನ ಕಾರ್ಯಕ್ರಮವು ಸುಳ್ಯದ ಪರಿವಾರಕಾನದಲ್ಲಿರುವ ಉಡುಪಿ ಗಾರ್ಡನ್‌ನ ಗ್ರ್ಯಾಂಡ್ ಪರಿವಾರ್ ಸಭಾಭವನದಲ್ಲಿ ಆ. 29 ರಂದು ನಡೆಯಿತು.

ಮಾಜಿ ಲಯನ್ ಜಿಲ್ಲಾ ರಾಜ್ಯಪಾಲ ಹಾಗೂ ಎಂ.ಬಿ. ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ.ಸದಾಶಿವರವರಿಗೆ ಇನ್‌ಸ್ಪೈಯರ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಜೇಸಿಐ ಭಾರತ ವಲಯ 15 ಇದರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಪ್ರಶಸ್ತಿ ಪ್ರದಾನ ನೆರವೇರಿಸಿದರು.

ಜೇಸಿಐ ಸುಳ್ಯ ಸಿಟಿ ಅಧ್ಯಕ್ಷೆ ಜೆಎಫ್ಎಂ ನಾಗವೇಣಿ ದಾಮೋದರ ಕೋರಡ್ಕ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆಯವರು ಅಭಿನಂದನಾ ಮಾತುಗಳನ್ನಾಡಿ, ಜೇಸೀ ವಾಣಿಯಲ್ಲಿ ಅಡಕವಾಗಿರುವಂತಹ ತತ್ವ ಮತ್ತು ಆದರ್ಶಗಳಂತೆ ಸಾಮಾಜಿಕ ಬದುಕಿನಲ್ಲಿ ಕ್ರಿಯಾಶೀಲರಾಗಿ ಎಲ್ಲರಿಗೂ ಸ್ಪೂರ್ತಿಯಾಗುವಂತೆ ಶ್ರೇಷ್ಠತೆ ಸಾಧಿಸಿದವರು ಎಂ.ಬಿ.ಸದಾಶಿವರು. ಹಾಗಾಗಿ ಜೇಸೀಐನ ಸ್ಪೂರ್ತಿಯ ಪ್ರಶಸ್ತಿ ನೀಡುವುದು ಅಭಿಮಾನದ ಸಂಗತಿ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ.ಬಿ.ಸದಾಶಿವರು, ನನ್ನೆಲ್ಲಾ ಮಾನವೀಯ ಕಾರ್ಯಗಳಿಗೆ ಜೇಸೀಯೇ ಶಕ್ತಿ ಮತ್ತು ಪ್ರೇರಣೆಯಾಗಿತ್ತು ಎಂದು ನೆನಪಿಸಿದರು.

ಜೇಸಿಐ ಭಾರತ ಪ್ರಾಂತ್ಯ ‘ಡಿ’ ವಲಯ 15 ಇದರ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ವಲಯ ಸಂಯೋಜಕ ವಿಷ್ಣುಪ್ರಕಾಶ್ ನಾರ್ಕೋಡು, ಕಾರ್ಯಕ್ರಮ ನಿರ್ದೇಶಕಿ ಉಮಾದೇವಿ ಯು.ಕೆ. ಉಪಸ್ಥಿತರಿದ್ದರು.

ಜೇಸಿಐ ಸುಳ್ಯ ಸಿಟಿ ಸ್ಥಾಪಕ ಅಧ್ಯಕ್ಷ ಮನಮೋಹನ ಬಳ್ಳಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ತೇಜಸ್ವಿ ಪ್ರಕಾಶ್ ನಾರ್ಕೋಡು ವಂದಿಸಿದರು.‌