














ಸಾರ್ವಜನಿಕ ಶ್ರೀ ವರಮಹಾಪೂಜಾ ಸಮಿತಿ ಕೊಡಿಯಾಲಬೈಲು ಇವರ ನೇತೃತ್ವದಲ್ಲಿ ವರಲಕ್ಷ್ಮೀ ಯುವತಿ ಮಂಡಲ (ರಿ) ಕೊಡಿಯಾಲಬೈಲು, ಎಂ.ಜಿ.ಎಂ. ಶಾಲಾ ಪೋಷಕರ ಸಮಿತಿ ಮತ್ತು ಶ್ರೀ ವಿಷ್ಣು ಯುವಕ ಮಂಡಲ (ರಿ.) ಕೊಡಿಯಾಲಬೈಲು ಹಾಗೂ ಶ್ರೀ ಮಹಮ್ಮಾಯಿ ಸೇವಾ ಸಮಿತಿ (ರಿ.) ಕೊಡಿಯಾಬೈಲು ಇವುಗಳ ಸಹಯೋಗದೊಂದಿಗೆ 3ನೇ ವರ್ಷದ ಸಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.೨೮ರಂದು ಗೌಡ ಸಮುದಾಯಭವನ, ಕೊಡಿಯಾಲಬೈಲು ಸುಳ್ಯ ಇಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ಬ್ರಹ್ಮಕುಮಾರಿ ಉಮಾವತಿ ಮತ್ತು ತಂಡದಿAದ ರಕ್ಷಾಬಂದನ ಕುರಿತು ತಿಳಿ ಹೇಳಿದರು. ಹಾಗೆಯೇ ಸಮುದಾಯದ ರಸ್ತೆಯ ದುರಸ್ತಿಗೆ 1ಕೋಟಿ ಅನುದಾನ ತರುವಲ್ಲಿ ಪ್ರಯತ್ನಿಸಿದ ಪಿ.ಎಸ್.ಗಂಗಾಧರ ಹಾಗೂ ಪಿಸಿ ಜಯರಾಮರನ್ನು ಗೌರವಿಸಲಾಯಿತು. ಇದೇ ಸಂದರ್ಭ ಲಕ್ಕಿ ಕೂಪನ್ ಡ್ರಾವನ್ನು ಕೂಡ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.
ಅಧ್ಯಕ್ಷೆ ಪುಷ್ಪಾವತಿ ಮಾಣಿಬೆಟ್ಟು ವಂದಿಸಿದರು. ಇದೇ ಸಂದರ್ಭ ಸಲಹೆಗಾರರಾದ ಲತಾಪ್ರಸಾದ್ ಕುದ್ಪಾಜೆ, ಕಾರ್ಯದರ್ಶಿ ಜಯಮಾಲ ಕುದ್ಪಾಜೆ, ಸರ್ವ ಸದಸ್ಯರು ಹಾಜರಿದ್ದರು. ಪುರೋಹಿತ ನಟರಾಜ ಶರ್ಮರಿಂದ ಪೌರೋಹಿತ್ಯ ನಡೆಯಿತು. ಗೌರವ ಸಲಹೆಗಾರ ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.







