ಅರಂತೋಡು ನ್ಯಾಯಬೆಲೆ ಅಂಗಡಿಯಲ್ಲಿ ಇಕೆವೈಸಿ ಸಹಕಾರಿಗೆ ಐರಿಸ್ ಯಂತ್ರ ಅಳವಡಿಕೆ

0

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೊಳಪಟ್ಟ ಪಡಿತರ ವಿತರಣೆ ವಿಭಾಗದಲ್ಲಿ ಇಕೆವೈಸಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಐರಿಸ್ ಯಂತ್ರವನ್ನು ಅಳವಡಿಸಲಾಗಿದೆ.

POS ಯಂತ್ರದಲ್ಲಿ ಗ್ರಾಹಕರ ಬೆರಳಚ್ಚು ಸರಿಯಾಗಿ ಬರದಿದ್ದರೆ, ಗ್ರಾಹಕರಿಗೆ ನೇರವಾಗುವ ದೃಷ್ಟಿಯಿಂದ ಹೊಸ ಐರಿಸ್ ಯಂತ್ರ ಅಳವಡಿಸಲಾಗಿದೆ. ಇದು ಗ್ರಾಹಕರ ಕಣ್ಣಿನ ಐರಿಸ್ ನ ವಿಶಿಷ್ಟ ಮಾದರಿ ಗುರುತಿಸಿ ಕೆವೈಸಿ ಅಪ್ಡೇಟ್ ಮಾಡಲು ಸಹಕರಿಸುತ್ತದೆ. ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕಾಗಿ ಅರಂತೋಡು ಸಹಕಾರ ಸಂಘದವರು ತಿಳಿಸಿದ್ದಾರೆ.