ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದಿಂದ ಮನವಿ















ಕಸ್ತೂರಿ ರಂಗನ್ ವರದಿ ಭಾದಿತ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಲ್ಲತ್ತಡ್ಕ, ಬಾಳುಗೋಡು ಗ್ರಾಮದ ಗ್ರಾಮಸ್ಥರ ಅಹವಾಲು ಆಲಿಸಿ ಸರ್ಕಾರಕ್ಕೆ ವರದಿಯಿಂದ ಆಗುವ ತೊಂದರೆ ಮನವರಿಕೆ ಮಾಡಲು ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಗ್ರಾಮ ಸಭೆಗೆ ಕರೆಯುವಂತೆ
ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಗ್ರಾ.ಪಂ ಗೆ ಸೆ.18 ರಂದು ಮನವಿ ಮಾಡಲಾಯಿತು.
ಸಂಘದ ಅಧ್ಯಕ್ಷರಾದ ಡಾl ಸೋಮಶೇಖರ ಅವರು ಮನವಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್, ನಿರ್ದೇಶಕರುಗಳಾದ ಶೇಷಪ್ಪ ಗೌಡ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು, ಹಿಮ್ಮತ್ ಕೆ.ಸಿ, ಗೋಪಾಲಕೃಷ್ಣ ಚಾಂತಳ, ಡ್ಯಾನಿ ಯಲದಾಳು, ರೇಗನ್ ಶೆಟ್ಯಡ್ಕ, ಬೊಳಿಯ ಬೆಂಡೋಡಿ, ಮಹಾಲಿಂಗ ನಾಯ್ಕ, ವೇದಾವತಿ ಮುಳ್ಳುಬಾಗಿಲು, ಮೇನಕ ಕೊಪ್ಪಡ್ಕ ಉಪಸ್ಥಿತರಿದ್ದರು.








