ತುಳು ಅಧಿಕೃತ ಭಾಷೆ ಘೋಷಣೆ, ಯಕ್ಷಗಾನ ಆರ್ಕೈವ್ಸ್ ಸ್ಥಾಪನೆ ತೀರ್ಮಾನ ಸ್ವಾಗತಾರ್ಹ

0

ಸೂಕ್ತ ಅನುದಾನ ನೀಡಿ ಸಾಕಾರಗೊಳ್ಳಲಿ : ಡಾ. ಕೇನಾಜೆ

ತುಳುವನ್ನು ಅಧಿಕೃತ ಭಾಷೆಯಾಗಿಯೂ ಯಕ್ಷಗಾನವನ್ನು ರಾಜ್ಯ ಕಲೆಯಾಗಿಯೂ ಮಾಡಬೇಕೆನ್ನುವ ಹಕ್ಕೊತ್ತಾಯವನ್ನು ಬಹಳ ಹಿಂದಿನಿಂದಲೂ ಮಾಡುತ್ತಾ ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ತುಳು ಭಾಷೆ ಮತ್ತು ಯಕ್ಷಗಾನ ಕಲೆಯನ್ನು ಶೈಕ್ಷಣಿಕವಾಗಿ ಪರಿಚಯಿಸುವ ಒಂದಷ್ಟು ಕೆಲಸಗಳನ್ನೂ ನಡೆಸಿದ್ದೇವೆ. ಈ ಕೆಲಸಗಳನ್ನು ಇನ್ನೂ ಅಧಿಕೃತವಾಗಿ ವಿಸ್ತರಿಸುವ ದೃಷ್ಟಿಯಿಂದ ಈ ಘೋಷಣೆ ಹಾಗೂ ಪ್ರೊ.ಬಿಳಿಮಲೆಯವರ ಸಲಹೆಯಂತೆ ಸದ್ಯ ಯಕ್ಷಗಾನ ಆರ್ಕೈವ್ಸ್ ಸ್ಥಾಪಿಸುವ ತೀರ್ಮಾನ ಸ್ವಾಗತಾರ್ಹವಾದುದು. ಸರಕಾರ ಇವೆರಡಕ್ಕೂ ಸೂಕ್ತ ಯೋಜನೆ ಹಾಗೂ ಪೂರಕ ಅನುದಾನಗಳನ್ನು ನೀಡಿ ಸಾಕಾರಗೊಳಿಸಬೇಕು. ಆಗ ಭಾಷೆ ಮತ್ತು ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಅಲ್ಲದೇ ಘೋಷಣೆಗಳಿಗೂ ಅರ್ಥ ಬರುತ್ತದೆ.

ಡಾ. ಸುಂದರ್ ಕೇನಾಜೆ
ಶಿಕ್ಷಕ, ಜಾನಪದ ಸಂಶೋಧಕ