ಎಡಮಂಗಲ: ಯುವ ಉದ್ಯಮಿ ಮೋಹನ್ ದಡ್ಡುರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಮೋಹನ್ ಕಠಿಣ ಪರಿಶ್ರಮಿಯಾಗಿದ್ದರು – ಸವಣೂರು ಸೀತಾರಾಮ ರೈ

ಮೋಹನ್ ದಡ್ಡುರವರು ಕಠಿಣ ಪರಿಶ್ರಮಿಯಾಗಿದ್ದರು. ಆರಂಭದಲ್ಲಿ ಪುತ್ತೂರಿನಲ್ಲಿ ಬೇಕರಿ ಮತ್ತು ಬೇಕರಿ ಉತ್ಪಾದನಾ ಘಟಕವನ್ನು ಆರಂಭಿಸಿ, ಬಳಿಕ ಸುಳ್ಯ, ಎಡಮಂಗಲಕ್ಕೆ ವಿಸ್ತರಿಸಿದ್ದರು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಬಾಳಿ ಬದುಕಬೇಕಾದ ಯುವಕ ನಮ್ಮನ್ನು ಅಗಲುವಂತಾಯಿತು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದ ಸವಣೂರು ಸೀತಾರಾಮ ರೈ ಹೇಳಿದರು.

ಅವರು ಸೆ. 19ರಂದು ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಸೆ. 12ರಂದು ನಿಧನರಾದ ಕಡಬ ತಾಲೂಕು ಎಡಮಂಗಲ ಗ್ರಾಮದ ಬೇಕರಿ ಉದ್ಯಮಿ ಮೋಹನ್ ನಾಯ್ಕ್ ದಡ್ಡುರವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸುತ್ತಾ ಹೇಳಿದರು. ಬಳಿಕ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರರಾದ ಈಶ್ವರ ವಾರಣಾಶಿ ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಪತ್ನಿ ಶ್ರೀಮತಿ ಕವಿತಾ, ಪುತ್ರಿ ಬೇಬಿ. ಹನಿಷ್ಕಾ, ಸಹೋದರಿ ಶ್ರೀಮತಿ ವಾರಿಜಾಕ್ಷಿ ರೋಶನ್ ಮಂಗಳೂರು, ಸೇರಿದಂತೆ ಎಡಮಂಗಲದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮೃತರ ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.