ಕೊಲ್ಲಮೊಗ್ರದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಗ್ರಾಮ ಸಭೆ

0

ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ ಸೆ.23 ರಂದು ಕಸ್ತೂರಿ ರಂಗನ್ ವಿಚಾರವಾಗಿ ವಿಶೇಷ ಗ್ರಾಮ ಸಭೆ ನಡೆಯಿತು.

ವೇದಿಕೆಯಲ್ಲಿ ಗ್ರಾ.ಪಂ ನ ಆಡಳಿತಾಧಿಕಾರಿ ಪೂವಯ್ಯ,ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಚೇತನ್,ಗ್ರಾಮ ಲೆಕ್ಕಧಿಕಾರಿ ಮದು, ಫಾರೆಸ್ಟ್ ಸದಾಶಿವ,ಪಿಡಿಒ ಚೆನ್ನಪ್ಪ ನಾಯ್ಕ,ಕೊಲ್ಲಮೊಗ್ರ ಹರಿಹರ ಪ್ರಾ.ಕೃ ಪ ಸಂಘದ ಅದ್ಯಕ್ಷ ಸೋಮಶೇಖರ ಕಟ್ಟೆಮನೆ ಉಪಸ್ಥಿತರಿದ್ದರು.

ಸೋಮಶೇಖರ ಕಟ್ಟೆಮನೆ, ಪ್ರದೀಪ್ ಕೆ ಎಲ್, ಅಶ್ವತ್ ಯಲದಾಳು,,ಸತ್ಯನಾರಾಯಣ ಬೆಂಡೋಡಿ,ಗಣೇಶ್ ಭಟ್, ಡ್ಯಾನಿ ಯಲದಾಳು,ಚಂದ್ರಶೇಖರ ಕೊಂದಾಳ, ಶೇಖರ ಅಂಬೆಕಲ್ಲು, ಸತೀಶ್ ಟಿ ಎನ್, ಹೂವಪ್ಪ ಸಂಪ್ಯಾಡಿ, ಹರೀಶ್ ಬಳ್ಳಡ್ಕ,ಅನಂತರಾಮ ಮಣಿಯಾನ ಮನೆ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಹಲವು ನಿರ್ಣಯವನ್ನು ಮಾಡಲಾಯಿತು.
ನಮ್ಮ ಗ್ರಾಮಗಳ ಭೂಮಿ ಮತ್ತು ಜನಜೀವನಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಚಟುವಟಿಕೆಗಳಿಗೆ ಈಗ ಅಸ್ತಿತ್ವದಲ್ಲಿರುವಂತೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯ ಸುಪರ್ದಿಯಲ್ಲೇ ಇರಬೇಕು.ಮತ್ತು ಗ್ರಾಮದೊಳಗೆ ಜನವಸತಿ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಯಾವದೇ ತರವಾದ ಹಸ್ತಕ್ಷೇಪ ಇರಬಾರದು, ಜನವಸತಿ ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶದ ವೈಜ್ಞಾನಿಕ ಗಡಿಗುರುತು ಮಾಡುವುದು.:ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜನವಸತಿ ಪ್ರದೇಶವನ್ನು ಅರಣ್ಯ ಇಲಾಖೆ,ಕಂದಾಯ ಇಲಾಖೆ ಮತ್ತು ಸ್ಥಳಿಯ ಜನಪ್ರತಿನಿಧಿಗಳನ್ನೊಳಗೊಂಡಂತೆ ಜಂಟಿಯಾಗಿ ಮ್ಯಾನುವೆಲ್ ಸರ್ವೆ ನಡೆಸುವುದು.ಅರಣ್ಯ ಬಫರ್ ಪ್ರದೇಶವನ್ನು ಶೂನ್ಯ ಬಫರ್ ಪ್ರದೇಶವನ್ನಾಗಿ ಮಾಡುವುದು. ಕಸ್ತೂರಿ ರಂಗನ್ ವರದಿಯ 7 ನೇ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಭಾಧಿತ ಕಲ್ಮಕಾರು ಗ್ರಾಮಸ್ಥರು ಮತ್ತು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಎಲ್ಲಾ ಗ್ರಾಮಸ್ಥರು ಸಂಪೂರ್ಣವಾಗಿ ತಿರಸ್ಕರಿಸಿದ ಆಕ್ಷೇಪಣೆಯ ಪ್ರಸ್ತಾವನೆಯನ್ನು ದಾಖಲಿಸಿಕೊಳ್ಳುವುದು.
ಸದ್ರಿ ಗ್ರಾಮ ಸಭೆಯ ನಿರ್ಣಯಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಲ್ಲಿಸುವುದು.

ಸಭೆಯಲ್ಲಿ ಹಳೆ ಗಡಿ ಗುರುತು ಮತ್ತು ಜನವಸತಿ ಪ್ರದೇಶ ಗಡಿ ಗುರಿತಿಸಿ ಕೊಡುವುದು, 1904 ರಿಂದ 1908 ರಂತೆ ಸರ್ವೆ ಪುನರ್ ಸ್ಥಾಪನೆ ಮಾಡುವುದು, ಹರಿಹರ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಗ್ರಾಮಗಳ ರಕ್ಷಣೆಗೋಸ್ಕರ ಕೂಜಮಲೆ ಎಸ್ಟೇಟ್, ಕಡಮಕಲ್ ಎಸ್ಟೇಟ್ ಹಾಗೂ ಪ್ರಂಚ್ ಸರ್ಕಾರದ 13 ಹೆಕ್ಟೇರ್ ಉಪ್ಪುಕಳ ರೀಸರ್ಚ್ ಸೆಂಟರ್ ನ ತೆರವು ಗೊಳಿಸುವುದು, 2006 ರ ಅರಣ್ಯ ಹಕ್ಕೆ ಊರ್ಜಿತಗೊಳಿಸುವುದು, 1908 – 1914 ನೊಟಿಪಿಕೇಶನ್ ಪ್ರಕಾರ ಕಂದಾಯ ಭೂಮಿಯನ್ನು ಸೇರ್ಪಡೆ ಗೊಳಿಸುವಂತೆ ಮರು ಪರಿಶೀಸುವುದು, ಎಲ್ಲಾ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಬೌತಿಕವಾಗಿ ಗಡಿಗುರುತು ಮಾಡಿಕೊಡುವುದು. ವರದಿ ಅನುಷ್ಠಾನಕ್ಕೆ ಪ್ರತಿಯೊಂದಕ್ಕೂ ಸ್ಥಳೀಯ ಗ್ರಾಮ ಪರಚಾಯತ್‌ನ ಅನುಮತಿ ಪಡೆದುಕೊಳ್ಳುವುದು ಮತ್ತು ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಗ್ರಾಮ ಪಚಾಯತ್ ಅಧ್ಯಕ್ಷರುಗಳನ್ನು ಸಮಿತಿಗೆ ಸೇರ್ಪಡೆ ಮಾಡಿಕೊಳ್ಳುವುದು. ಕಸ್ತೂರಿ ರಂಗನ್ ವರದಿ ಬಗ್ಗೆ ಈ ಮೊದಲು ಮಾಡಿದ ಐದು ಸಭೆಗಳ ತೀರ್ಮಾನಗಳನ್ನು ಪರಿಗಣಿಸಬೇಕು. ಕಲ್ಮಕಾರು ಗ್ರಾಮವನ್ನು ಕಸ್ತೂರಿ ರಂಗನ್ ವರದಿಯಿಂದ ಕೈಬಿಡಬೇಕು.


1972ರ ಕಾಯ್ದೆಯಂತೆ ಹಿಂದಿನ ಕೋವಿ ಪರವಾನಿಗೆಯನ್ನು ಊರ್ಜಿತದಲ್ಲಿ ಇಡುವುದು.
ಯಾವುದೇ ಜಲವಿದ್ಯುತ್ ಯೋಜನೆ ಅನುಷ್ಠಾನ ಮಾಡಬಾರದು.ಹಾಲಿ ಇರುವ ಎಲ್ಲಾ ರಸ್ತೆಗಳು ಯಥಾಸ್ಥಿತಿಯಲ್ಲಿ ಊರ್ಜಿತದಲ್ಲಿ ಇಡಬೇಕು.
2006ರ ಕಾಯ್ದೆ ಪ್ರಕಾರ ಅರಣ್ಯ ಗ್ರಾಮವನ್ನಾಗಿ ಊರ್ಜಿತದಲ್ಲಿ ಇಡುವುದು.ಎಲ್ಲಾ ಸರಕಾರಿ ಮತ್ತು ಖಾಸಗಿ ವಾಹನಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸುವುದು.ಮೂಲ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳುವುದು. ಅರಣ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ಸುರಕ್ಷಿತ ಅರಣ್ಯ ಡೀಮ್‌ಡ್ ಪೋರೇಸ್ಟ್ ಸಾಮಾಜಿಕ ಅರಣ್ಯ,ಜಿಲ್ಲಾ ಅರಣ್ಯ, ವನ್ಯ ಧಾಮ ಗಳನ್ನಾಗಿ ಪ್ರತ್ಯೇಕ ಪ್ರತ್ಯೇಕವಾಗಿ ವಿಂಗಡಿಸುವುದು.

ಸದ್ರಿ ಗ್ರಾಮ ಸಭೆಯ ನಿರ್ಣಯಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಲ್ಲಿಸುವುದಾಗಿ ನಿರ್ಣಯಿಸಲಾಯಿತು.