ಕೊಡಗು ಸಂಪಾಜೆ ಗ್ರಾ.ಪಂ ಕಸ್ತೂರಿ ರಂಗನ್ ವರದಿ ವಿಶೇಷ ಗ್ರಾಮ ಸಭೆ

0

ಕಸ್ತೂರಿ ರಂಗನ್ ವರದಿಯಿಂದ ಗ್ರಾಮವನ್ನು ಸಂಪೂರ್ಣವಾಗಿ ಕೈ ಬಿಡುವಂತೆ ಗ್ರಾಮಸ್ಥರಿಂದ ಕೇಂದ್ರ ಸರ್ಕಾರಕ್ಕೆ ಮನವಿ

ಕೊಡಗು ಸಂಪಾಜೆ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರದೇಶಗಳು ಹಾಗೂ ಅದರ ಪರಿಣಾಮಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಆಕ್ಷೇಪಣೆಗಳು, ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಪಡೆಯುವ ಉದ್ದೇಶದಿಂದ ವಿಶೇಷ ಗ್ರಾಮ ಸಭೆಯನ್ನು
ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿ ಎಸ್.ಎಲ್ ಮಹೇಶ್ ಕುಮಾರ್ , ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮಡಿಕೇರಿ ಅಧ್ಯಕ್ಷತೆಯಲ್ಲಿ ಸೆ.23 ರಂದು ನಡೆಯಿತು.

ಕಸ್ತೂರಿರಂಗನ್ ಗಂಭೀರ ಚರ್ಚೆಯಲ್ಲಿ ಕೊಡಗು ಸಂಪಾಜೆ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಾಗಿದ್ದು, ಸಿಬ್ಬಂದಿಗಳನ್ನು ಕಳುಹಿಸಿದ ಕಾರಣ ಗ್ರಾಮಸ್ಥರು ಗರಂ ಆಗಿ ಆಕ್ಷೇಪಣೆ ವ್ಯಕ್ತ ಪಡಿಸಿದರು. ಕೊಡಗು ಸಂಪಾಜೆ ಗ್ರಾಮಸ್ಥರ ಪರವಾಗಿ ತಿರುಮಲ ಸೋನ ಅವರು ಮಾತನಾಡಿ ಇಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಮುಖ್ಯ ಅಲ್ಲ ಆದರೆ ಇಲ್ಲಿ ನಮಗೆ ಕಸ್ತೂರಿರಂಗನ್ ವಿಚಾರದ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸುವುದು ಮುಖ್ಯ ಇದರಲ್ಲಿ ಗ್ರಾಮಸ್ಥರು ಎಲ್ಲರು ಸೇರಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಬೇಕು ಅದರ ವಿರುದ್ಧ ನಾವು ನಮ್ಮ ಆಕ್ಷೇಪಣೆಗಳನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅರ್ಜಿ ಕೊಡಬೇಕು ಆಗ ನಾವು ಅಧಿಕಾರಿ ವರ್ಗದ ಜೊತೆ ಹೊಂದಾಣಿಕೆಯಿಂದ ಹೋದಾಗ ಅಧಿಕಾರಿ ವರ್ಗದವರು ನಮಗೆ ಬೆಂಬಲವನ್ನ ಕೊಟ್ಟು ವರದಿಯನ್ನ ವೆಬ್ಸೈಟ್ ಮಾಡಿ ಕೇಂದ್ರ ಸರ್ಕಾರಕ್ಕೂ ಮತ್ತು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಈ ಮನವಿಯನ್ನ ಸಲ್ಲಿಸುವ ವ್ಯವಸ್ಥೆ ಮಾಡುತ್ತಾರೆ ಇಂತಹ ವ್ಯವಸ್ಥೆ ನಮ್ಮ ಕರ್ನಾಟಕ ರಾಜ್ಯದ ಡಿಕೆಶಿ ಶಿವಕುಮಾರ್ ಅವರು ಅವಕಾಶ ಮಾಡಿಕೊಟ್ಟಿರುವುದರಿಂದ ನಮಗೆ ಗ್ರಾಮದಲ್ಲಿ ಕೇರಳ ಮಾದರಿಯ ಆ ಭೌತಿಕ ಸರ್ವೇ ಫಿಸಿಕಲ್ ಸರ್ವೆಯನ್ನು ಮಾಡುವ ಅವಕಾಶ ದೊರೆತರೆ ನಮ್ಮ ಈ ಕಸ್ತೂರಿರಂಗನ್ನು ವರದಿಯು ಅದಕ್ಕೆ ತಿಲಂಜಲಿ ಹಾಕಬಹುದು, ಕೇರಳ ಮಾದರಿಯಲ್ಲೇ ಆಗಬಹುದು ಎಂದು ಚರ್ಚೆಗಳು ನಡೆಯಿತು.
ಗ್ರಾಮಸ್ಥರ ಆಕ್ಷೇಪಣೆಯ ಪ್ರಕಾರ ಸಂಪಾಜೆ ಗ್ರಾಮದ ಖಾಯಂ ನಿವಾಸಿಗಳಾದ ನಾವುಗಳು ಮತ್ತು ನಾವೆಲ್ಲರೂ ಕೃಷಿಕ ವರ್ಗದವರು. ನಮ್ಮ ಜಮೀನುಗಳಿಗೆ ಹಿರಿಯರ ಕಾಲದಲ್ಲಿಯೇ ಸರಕಾರ ಅಧಿಕೃತವಾಗಿ ಭೂಮಿಯ ದಾಖಲೆಗಳನ್ನು ಕೊಟ್ಟಿರುತ್ತಾರೆ.ಹೀಗಿದ್ದೂ ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ ಈ ಬಗ್ಗೆ ನಮ್ಮ ಆಕ್ಷೇಪಣೆ ಪ್ರಕಾರ : ನಮ್ಮ ಗ್ರಾಮದಲ್ಲಿ ತಲೆ ತಲಾಂತರದಿಂದ ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ, ಇಲ್ಲಿ ಯಾವುದೇ ಗಣಿಗಾರಿಕೆ , ಕ್ವಾರಿ, ದೊಡ್ಡ ಕೈಗಾರಿಕೆ ಇಲ್ಲ. ಹಾಗೂ ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ. ನಮ್ಮ ಮನೆ , ಕೃಷಿ ಭೂಮಿ, ಗ್ರಾಮೀಣ ಪ್ರದೇಶವನ್ನು ಉಪಗ್ರಹ ಚಿತ್ರ ಆಧಾರದ ಮೇಲೆ ಸೂಕ್ಷ್ಮ ವಲಯ ಪರಿಸರ ಎಂದು ಗುರುತಿಸಲಾಗಿದೆ. ಇದು ವೈಜ್ಞಾನಿಕವಲ್ಲ. ಹಾಗೂ ಕೇರಳ ಮಾದರಿಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಭೌತಿಕ ಸರ್ವೇ ಮಾಡಬೇಕು. ಇ.ಎಸ್. ಎ ಪರಿಸರ ಸೂಕ್ಮ ವಲಯ ಆದರೆ ಹೊಸ ಮನೆ ಕಟ್ಟಲು , ರಸ್ತೆ , ಆಸ್ಪತ್ರೆ , ಶಾಲೆ , ವಿದ್ಯುತ್ ಸಂಪರ್ಕಕಕ್ಕೆ ಅನುಮತಿ ಸಿಗುವುದಿಲ್ಲ ಎಂಬ ಭಯ ನಮ್ಮಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡ ಗಡಿ ಗ್ರಾಮವಾದ ನಮ್ಮ ಅಭಿವೃದ್ಧಿ ನಿಂತು ಹೋಗುತ್ತದೆ. ಆದುದ್ದರಿಂದ ನಮ್ಮ ಜನವಸತಿ ಪ್ರದೇಶ , ಕೃಷಿ ಭೂಮಿ ಮತ್ತು ಗ್ರಾಮೀಣ ಪ್ರದೇಶವನ್ನು ಕಸ್ತೂರಿರಂಗನ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಕಸ್ತೂರಿ ರಂಗನ್ ವರದಿಗೆ ಗ್ರಾಮಸ್ಥರೆಲ್ಲರೂ ಸರ್ವಾನುಮತದಿಂದ ಸಹಿ ಹಾಕಿ ಆಕ್ಷೇಪಣೆ ಸಲ್ಲಿಸಿದರು.

ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಸೂಕ್ತ ಸಲಹೆಯನ್ನು ನೀಡಿದ ತಿರುಮಲ ಸೋನರವನ್ನು ಅಧಿಕಾರಿಗಳು ಅಭಿನಂದಿಸಿದರು.

ಈ ಗ್ರಾಮದಲ್ಲಿ ಮಂಡಲ ಪಂಚಾಯತ್ ಗ್ರಾಮ ಪಂಚಾಯತ್ ಪಿಡಿಒ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗ ಆಗುವ ಸಾಧ್ಯತೆ ನೋಡಲು ಅಧಿಕಾರಿ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲಾ ಅಧಿಕಾರಿ ವರ್ಗ , ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.