ಮಂಡೆಕೋಲು ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ಪ್ರಶಸ್ತಿ

0

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ (ಸ್ಕ್ಯಾಡ್ಸ್) ಇದರ‌ ಮಹಾಸಭೆಯ ಸಂದರ್ಭ ಕೊಡಮಾಡುವ ಸ್ಕ್ಯಾಡ್ಸ್ ಪ್ರಶಸ್ತಿಗೆ ಮಂಡೆಕೋಲು ಸಹಕಾರ ಸಂಘ ಭಾಜನವಾಗಿದ್ದು ಸೆ.23ರಂದು ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ವರದಿ ಸಾಲಿನಲ್ಲಿ ಸ್ಕ್ಯಾಡ್ಸ್ ಸಂಸ್ಥೆಯ ಜತೆ ಅತ್ಯುತ್ತಮ ವ್ಯವಹಾರ ನಡೆಸಿದ ಮಂಡೆ ಕೋಲು ಸಹಕಾರ ಸಂಘ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಹಾಗೂ ಮುಖ್ಯ‌ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ ಪ್ರಶಸ್ತಿ ಸ್ವೀಕರಿಸಿದರು.