ಅ.11 ರಿಂದ ನವರಾತ್ರಿ: ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

0


ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.11 ರಿಂದ ಆರಂಭಗೊಳ್ಳಲಿರುವ ನವರಾತ್ರಿ ಉತ್ಸವದ ತಯಾರಿಯ ಬಗ್ಗೆ ಆಡಳಿತ ಮತ್ತು ಉತ್ಸವ ಸಮಿತಿಯ ಸಭೆ ಸೆ.21 ರ ಸಂಜೆ ದೇವಳದ ವಠಾರದಲ್ಲಿ ನಡೆಯಿತು.

ಆಡಳಿತ ಸಮಿತಿಯ ಅಧ್ಯಕ್ಷ ರಾದ ಶ್ರೀ ಡಿ.ಕೆ. ಸಂದೀಪ್, ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಸೀತಾರಾಮ್ ಕುತ್ಯಾಡಿ, ಉಪಾಧ್ಯಕ್ಷೆ ಶ್ರೀಮತಿ ಲೀಲಾ ವಾಸುದೇವ, ಕಾರ್ಯದರ್ಶಿ ಎಸ್.ಎನ್.ಪ್ರಭಾಕರ್, ಖಜಾಂಚಿ ಡಿ.ಕೆ. ಸುಭಾಷ್, ಸಂಚಾಲಕ ಪ್ರದೀಪ್ ಡಿ.ಕೆ. ಟ್ರಸ್ಟಿಗಳಾದ ಡಿ. ಎಸ್. ಗಿರೀಶ್, ಡಿ.ಎಸ್.ವಿದ್ಯಾಧರ ಹಾಗೂ ಉತ್ಸವ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ನವರಾತ್ರಿ ಉತ್ಸವದ ತಯಾರಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ನವರಾತ್ರಿ ಉತ್ಸವ ವು ಅ.11 ರಿಂದ ಆರಂಭಗೊಂಡು ಅ.20 ರಂದು ವಿಜಯ ದಶಮಿ ಹಬ್ಬದೊಂದಿಗೆ ಸಮಾಪ್ತಿಗೊಳ್ಳಲಿರುವುದು.