













ಅಜ್ಜಾವರ ಗ್ರಾಮದ ಓ೦ ಫ್ರೆಂಡ್ಸ್ ( ರಿ.) ಇದರ ನೂತನ ಆಡಳಿತ ಮಂಡಳಿ ರಚನೆ ಹಾಗೂ ವಾರ್ಷಿಕ ಮಹಾಸಭೆ ಸೆ.20 ರಂದು ಅಜ್ಜಾವರದ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಗಿರೀಶ್ ಗೋರಡ್ಕ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ನಾರಾಲು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಗಗನ್ ಅತ್ಯಾಡಿ, ಖಜಾಂಜಿಯಾಗಿ ಜಯಂತ್ ಕಲ೯ಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ನವೀನ್ ಕಲ೯ಪ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಗೌತಮ್ ಅತ್ಯಾಡಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಸೀತಾರಾಮ ಕರ್ಲಪ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು.







