ಮಂಗಳೂರು ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ -ಉಪನ್ಯಾಸ

0

ಮಂಗಳೂರಿನ ಯೆಯ್ಯಾಡಿಯಲ್ಲಿರುವ ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಭಾರತಿಯ ಸಹಯೋಗದೊಂದಿಗೆ ಸೆ. 23ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ
‘ಆರೋಗ್ಯಕರ ನಾಳೆಗಾಗಿ ಆಯುರ್ವೇದ’ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಭಾರತಿಯ ಪ್ರಾಂತ ಉಪಾಧ್ಯಕ್ಷರೂ, ಜಿಲ್ಲಾ ಗೌರವಾಧ್ಯಕ್ಷರೂ ಆದ ಡಾ. ಮುರಳೀ ಮೋಹನ ಚೂಂತಾರು ಹಾಗೂ ಜಿಲ್ಲಾ ಅಧ್ಯಕ್ಷರಾದ ಡಾ. ಈಶ್ವರ ಭಟ್ ಪಳ್ಳಾದೆಯವರು ಭಾಗವಹಿಸಿದ್ದರು. ವೇದಮಾಯು ಆಸ್ಪತ್ರೆಯ ಡಾ. ಕೇಶವರಾಜ್ ಉಪನ್ಯಾಸ ನೀಡಿದರು. ದ.ಕ ಜಿಲ್ಲಾ ಆರೋಗ್ಯ ಭಾರತಿಯ ಕಾರ್ಯದರ್ಶಿ ಉಮೇಶ್, ಸಹ ಕಾರ್ಯದರ್ಶಿ ದಿನೇಶ್, ಜಿಲ್ಲಾ ಸಂಯೋಜಕರಾದ ಪುರುಷೋತ್ತಮ ದೇವಸ್ಯ ಉಪಸ್ಥಿತರಿದ್ದರು.