ರಾಷ್ಟ್ರಪ್ರಶಸ್ತಿ ಸ್ವರ್ಣಕಮಲ ಪಡೆದ ಸುಳ್ಯ ಗಾಂಧಿನಗರ ಕೆ.ಪಿ.ಎಸ್. ಶಾಲಾ ಉಪನ್ಯಾಸಕ ಡಾ.ಪ್ರದೀಪ್ ಶೆಟ್ಟಿ ಕೆಂಚನೂರು ಸುಳ್ಯದಲ್ಲಿ ಅದ್ದೂರಿ ಸ್ವಾಗತ

0

ಖಾಸಗಿ ಬಸ್ಸು ನಿಲ್ದಾಣ ಬಳಿಯಿಂದ ಗಾಂಧಿನಗರ ಕೆಪಿಎಸ್ ಶಾಲೆಯವರೆಗೆ ಭವ್ಯ ಮೆರವಣಿಗೆ

ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪಿ.ಯು. ವಿಭಾಗದ ಇತಿಹಾಸ ಉಪನ್ಯಾಸಕ ಡಾ.ಪ್ರದೀಪ್ ಶೆಟ್ಟಿ ಕೆಂಚನೂರುರವರು ಕನ್ನಡ ಚಲನಚಿತ್ರಗಳ ತತ್ವ ಮತ್ತು ರಾಜಕೀಯದ ಕುರಿತು ಬರೆದ ಪುಸ್ತಕಕ್ಕೆ ಚಲನಚಿತ್ರ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಸೆ.24 ರಂದು ಸುಳ್ಯದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮ ನಡೆಯಿತು. ಬಳಿಕ ಅವರನ್ನು ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿಯಿಂದ ಗಾಂಧಿನಗರ ಕೆಪಿಎಸ್ ಶಾಲೆಯವರೆಗೆ ಭವ್ಯ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.ಗುಜರಾತಿನಲ್ಲಿ ನಡೆದ 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟಪತಿ ಬ್ರೌಪದಿ ಮುರ್ಮು ಅವರಿಂದ ಡಾ.ಪ್ರದೀಪ್‌ ಕೆಂಚನೂರು ಅವರು ಸ್ವರ್ಣಕಮಲ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಸುಳ್ಯಕ್ಕೆ ಆಗಮಿಸಿದ ಅವರನ್ನು ಬಸ್‌ ನಿಲ್ದಾಣದಲ್ಲಿ ಸ್ವಾಗತಿಸಿ ತೆರೆದ ವಾಹನದಲ್ಲಿ ಗಾಂಧಿನಗರ ಕೆಪಿಎಸ್‌ಗೆ ಕರೆ ತರಲಾಯಿತು.ಬಳಿಕ ಶಾಲಾ ಎಸ್‌ಡಿಎಂಸಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಸುಳ್ಯ ತಹಶೀಲ್ದಾ‌ರ್ ಶ್ರೀಮತಿ ಎಂ.ಮಂಜುಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಎನ್‌.ಎ.ರಾಮಚಂದ್ರ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ, ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು, ಗಾಂಧಿನಗರ ಕೆಪಿಎಸ್‌ ಕಾರ್ಯಾಧ್ಯಕ್ಷ ಚಿದಾನಂದ ಕುದ್ದಾಜೆ, ಪ್ರಾಂಶುಪಾಲೆ ಪರಮೇಶ್ವರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಬಿ.ಇಬ್ರಾಹಿಂ, ಉಪನ್ಯಾಸಕರಾದ ಅಬ್ದುಲ್ ಸಮದ್‌, ರಾಜೇಶ್‌, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅಶ್ವಿನಿ,ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ ಲಕ್ಷ್ಮಿ ಸುಳ್ಯ ಕೆಪಿಎಸ್ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಸುಳ್ಯ ಕೆ ಪಿ ಎಸ್ ನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ, ಗಣ್ಯರುಗಳಾದ ಚಂದ್ರಶೇಖರ ಪೇರಾಲು, ದಿನೇಶ್ ಮಡಪ್ಪಾಡಿ, ಶರೀಫ್‌ ಕಂಠಿ, ರಾಮಚಂದ್ರ ಪಲ್ಲತ್ತಡ್ಕ, ಪ್ರಶಾಂತ್ ಕಾಯರ್ತೋಡಿ,ಹರೀಶ್, ಅನಿತಾ ಕಾಯರ್ತೋಡಿ, ಸುಪ್ರೀತ್ ಮೋಂಟಡ್ಕ, ರಿಯಾಝ್ ಕಟ್ಟೆಕ್ಕಾರ್, ರಂಜಿತ್ ಪೂಜಾರಿ, ನಿವೃತ್ತ ಶಿಕ್ಷಕಿ ಚಂದ್ರಮತಿ.ಕೆ ಗಾಂಧಿನಗರ ಕೆಪಿಎಸ್ ಎಸ್ಡಿಎಂಸಿ ಸದಸ್ಯರುಗಳಾದ ನವೀನ್ ಕುಮಾರ್,
ಅಝೀಜ್, ವಿಜಯಕುಮಾರ್ ದೆಂಗೋಡಿ,ಭವಾನಿ ಟೀಚರ್, ವಿನೋದ್ ಭಾಸ್ಕರ್, ಹರೀಶ್ ಜಲ್ಸೂರು ಅನಿತಾ ಕಾರ್ಯಾತೋಡಿ, ಭುವನ,ಸುಮೇರಾ ಮೊದಲಾದವರು ಉಪಸ್ಥಿರಿದ್ದರು.