ಏನೆಕಲ್ಲು ದೇವಾಲಯದಲ್ಲಿ ಅಷ್ಟಮಂಗಳ ಪ್ರಶ್ನೆ

0

ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಉಳ್ಳಾಕುಳು ಉಳ್ಳಾಳ್ತಿ ಹಾಗೂ ಬಚ್ಚ ನಾಯಕ ದೈವಸ್ಥಾನದಲ್ಲಿ ಸೆ.21 ರಿಂದ ಸೆ.23 ರ ತನಕ ಅಷ್ಟಮಂಗಳ ಪ್ರಾಶ್ನಾ ಚಿಂತನೆ ನಡೆಯಿತು.
ಪ್ರಶ್ನೆ ಯಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆದ ವ್ಯತ್ಯಾಸದ ಬಗ್ಗೆ ಕಂಡಿರುವುದಾಗಿ ತಿಳಿದು ಬಂದಿದೆ. ಮೂರು ದಿನಗಳ ಕಾಲ ಪ್ರಶ್ನಾ ಚಿಂತನೆ ನಡೆದಿದ್ದು ಇನ್ನು ಅ.1 ರಿಂದ ಅ.3 ರ ತನಕ ನಡೆಯಲಿದೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಮಾಗಣೆ ಗೌಡರು, ಊರ ಗೌಡರು, ದೇವಾಲಯದ ಸೇವಾ ವರ್ಗ, ಊರ ಭಕ್ತಾಧಿಗಳು ಉಪಸ್ಥಿತರಿದ್ದರು.