













ಸೆ. 20ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಅಂತರ ಜಿಲ್ಲಾ ಮಾಸ್ಟರ್ಸ್ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿ. ಸುಭಾಶ್ಚಂದ್ರ ರೈ ತೋಟ 70ರ ಮೇಲ್ಪಟ್ಟ ವಯೋಮಾನದ 100 ಮೀ, 200 ಮೀ. ಓಟ ಮತ್ತು ಚಕ್ರ ಎಸೆತದಲ್ಲಿ ಕಂಚಿನ ಪದಕ, ಬಾಲಕೃಷ್ಣ ರೈ ಪಾದೆಕಲ್ಲು 50ರ ಮೇಲ್ಪಟ್ಟ ವಯೋಮಾನದ ಟ್ರಿಪಲ್ ಜಂಪ್ , ಚಕ್ರ ಎಸೆತನಲ್ಲಿ ಚಿನ್ನದ ಪದಕ, 800 ಮೀ. ಓಟದಲ್ಲಿ ಬೆಳ್ಳಿ ಪದಕ ಹಾಗೂ ಬಾಳಿಲದ ಯತೀಶ್ ಗೌಡ ಮಿನಂಗೂರು 35ರ ಮೇಲ್ಪಟ್ಟ ವಯೋಮಾನದ ಚಕ್ರೆಸೆತದಲ್ಲಿ ಕಂಚಿನ ಪದಕ ಪಡೆದು ನವೆಂಬರ್ ತಿಂಗಳ 14-15ರಂದು ಧಾರವಾಡದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.







