













ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಉಪಕ್ರಮದಡಿ ಮೈಸೂರಿನಲ್ಲಿ ಸೆ. 27 ರಿಂದ ಸೆ. 30 ರವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ಸುಳ್ಯದ ಸುದ್ದಿ ಬಿಡುಗಡೆ ಯ
ಪತ್ರಕರ್ತರಾದ ಜಯಶ್ರೀ ಕೊಯಿಂಗೋಡಿ ಮತ್ತು ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಆಯ್ಕೆಯಾಗಿದ್ದಾರೆ.
ಇವರು ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜಯಶ್ರೀ ಕೊಯಿಂಗೋಡಿ ಅವರು ಸುಳ್ಯ ಕಸಬಾ ಕೊಯಿಂಗೋಡಿಯ ಶಿವಕುಮಾರ್ ಕೊಯಿಂಗೋಡಿ ಅವರ ಪತ್ನಿ. ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಯವರು ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಯ ಉಪಾಧ್ಯಕ್ಷರಾದ ಐವರ್ನಾಡು ಗ್ರಾಮದ ಕೋಡ್ತಿಲು-ಅಚ್ರಪ್ಪಾಡಿಯ
ಸತ್ಯನಾರಾಯಣ ಅಚ್ರಪ್ಪಾಡಿ ಅವರ ಪತ್ನಿ.







