













ಸುಳ್ಯ ನಗರದ ಶ್ರೀರಾಂ ಪೇಟೆಯಲ್ಲಿ ಬಸ್ ನಿಲ್ಲಿಸಲು ಬಸ್ ಬೇ ಮಾಡಲಾಗಿದ್ದು ಅದರೊಳಗೆ ಬಸ್ ನಿಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಸುಳ್ಯ ಡಿಪ್ಪೋ ಮ್ಯಾನೇಜರ್ ಶ್ರೀಮತಿ ಸತ್ಯಲತಾ ತಿಳಿಸಿದ್ದಾರೆ.

ಸುದ್ದಿ ವೆಬ್ ಸೈಟ್ ನಲ್ಲಿ ಈ ವಾರ ಪ್ರಕಟವಾದ ‘ಸುಳ್ಯ ನಗರದಲ್ಲಿ ಬಸ್ ಬೇ ಇದ್ದರೂ ಸದುಪಯೋಗ ಪಡೆದುಕೊಳ್ಳದ ಬಸ್ಸು ಚಾಲಕರು’ ಎಂಬ ವರದಿಗೆ ಪ್ರತಿಕ್ರಿಯಿಸಿದ ಡಿಪ್ಪೋ ಮ್ಯಾನೇಜರ್ ರವರು “ಎಲ್ಲಾ ಬಸ್ ಚಾಲಕರಿಗೆ ಈ ಕುರಿತು ನಿರ್ದೇಶನ ನೀಡಲಾಗಿದ್ದು, ಆದರೆ ಬಸ್ ಬೇ ಪಕ್ಕದಲ್ಲೇ ಕಾರು ಗಳು ನಿಂತಿರುತ್ತವೆ ಎಂಬ ದೂರುಗಳು ಚಾಲಕರು ಹೇಳುತ್ತಿದ್ದಾರೆ. ಆದ್ದರಿಂದ ಖಾಸಗಿ ವಾಹನ ಚಾಲಕರು ಕೂಡಾ ಬಸ್ ಬೇ ಎದುರು ವಾಹನ ನಿಲ್ಲಿಸಬಾರದೆಂದು ನಾವು ಮನವಿ ಮಾಡುತಿದ್ದೇವೆ ಎಂದು ಅವರು ತಿಳಿಸಿದ್ದಾರೆ.







