ಸೆ. 27 : ತುಳುನಾಡ ಜವನೆರ್ ಬೆಂಗಳೂರು ಅಷ್ಟಮಿದ ಐಸಿರ – 2026 ಕಾರ್ಯಕ್ರಮದಲ್ಲಿ ಡ್ಯಾನ್ಸ್ ಆಂಡ್ ಬೀಟ್ಸ್ ಬೆಳ್ಳಾರೆ ತಂಡದಿಂದ ನೃತ್ಯ ಕಾರ್ಯಕ್ರಮ

0

ತುಳುನಾಡ ಜವನೆರ್ ಬೆಂಗಳೂರು (ರಿ) ಆಯೋಜಿಸಿರುವ ಅಷ್ಟಮಿದ ಐಸಿರ – ೨೦೨೬ ಅದ್ದೂರಿ ಮತ್ತು ಬೃಹತ್ ಜನಸ್ತೋಮ ಸೇರುವ ಕಾರ್ಯಕ್ರಮವು ಸೆ. ೨೭ ರಂದು
ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಸಂಘದ ಆವರಣದಲ್ಲಿ ನಡೆಯಲ್ಲಿದ್ದು ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಪ್ರತಿಷ್ಟಿತ ನೃತ್ಯ ತಂಡವಾದ ಜೀವನ್ ಟಿ.ಎನ್. ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ ಆಂಡ್ ಬೀಟ್ಸ್ ತಂಡವು ನೃತ್ಯ ಕಾರ್ಯಕ್ರಮ ನೀಡಲಿದೆ.
ತಂಡದಲ್ಲಿ ಸುಮಾರು ೨೦ ಪ್ರತಿಭಾನ್ವಿತ ಯುವ ನೃತ್ಯ ಪಟುಗಳು ಭಾಗವಹಿಸುತ್ತಿದ್ದು ಅಪರಾಹ್ನ ೧೨ ಗಂಟೆಯ ಸಮಯಕ್ಕೆ ತಂಡದ ನೃತ್ಯ ಪ್ರದರ್ಶನವಿದೆ.