













ಪೆರಾಜಿಯ ಜ್ಯೋತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟು ಬುಕ್ ವಿತರಣೆ ಕಾರ್ಯಕ್ರಮ ಸಪ್ಟೆಂಬರ್ 23ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಆರ್ ವಿ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ. ಉಮಾ ಬಿ.ವಿ., ಜ್ಯೋತಿ ವಿದ್ಯಾಸಂಘದ ಉಪಾಧ್ಯಕ್ಷ ರಕ್ಷಿತ್ ಕೆ.ಪಿ., ಶ್ರೀಮತಿ ಸುಮಾ ನಾಗರಾಜ್, ಅನಂತ, ನಾಗರಾಜ್ ಸಿ.ಎಚ್., ಶಾಲ ಸಂಚಾಲಕ ಮಹೇಶ್ ಕುಮಾರ್ ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಜಿ.ಆರ್. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ನಂತರ 105 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಿ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಯಿತು.
ಶ್ರೀಮತಿ ಅರ್ಚನಾ ಕೆ.ವಿ. ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶೃತಿ ವಂದಿಸಿದರು.







