ಇ.ಕೆ.ವೈ.ಸಿ. ತಾಲೂಕಿನಲ್ಲಿ ಶೇ.75 ಪ್ರಗತಿ : ಅ.20 ಕೊನೆಯ ದಿನ

ಸುಳ್ಯ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯು ಸೆ.29ರಂದು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಣತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.














ಸದಸ್ಯರುಗಳಾದ ಈಶ್ವರ ಆಳ್ವ, ಅಬ್ಬಾಸ್ ಎ.ಬಿ., ಧನುಷ್ ಕುಕ್ಕೆಟ್ಟಿ, ಲತೀಫ್ ಅಡ್ಕಾರು, ಜ್ಞಾನಶೀಲನ್ ನೆಲ್ಲಿಕುಮೇರಿ, ರವಿ ಗುಂಡ್ಯಡ್ಕ, ಭವಾನಿ ಬೊಮ್ಮೆಟ್ಟಿ, ಕಾಂತಿ ಸಂಪಾಜೆ, ವಿಜೇಶ್ ಹಿರಿಯಡ್ಕ, ಸೋಮಶೇಖರ ಕೇವಳ, ಭವಾನಿಶಂಕರ ಕಲ್ಮಡ್ಕ ಇದ್ದರು. ಸದಸ್ಯ ಕಾರ್ಯದರ್ಶಿ ಇ.ಒ. ರಾಜಣ್ಣ ಕಲಾಪ ನಡೆಸಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಹಾರ ನಿರೀಕ್ಷಕರು, “ಪಡಿತರ ಮಾರಾಟ ಮಾಡುತ್ತಿದ್ದಾರೆಂದು ಕಳೆದ ಸಭೆಯಲ್ಲಿ ಪ್ರಸ್ತಾಪಗೊಂಡಿರುವ ಪ್ರಕಾರ, ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಮಾರಾಟ ಮಾಡದಂತೆ ಸೂಚನಾ ಫಲಕ ಅಳವಡಿಸಲಾಗಿದೆ. ಪಡಿತರ ಮಾರಾಟ ಕಂಡು ಬಂದರೆ ರೇಷನ್ಕಾರ್ಡ್ ರದ್ದು ಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಡಿತರ ಇಕೆವೈಸಿ ತಾಲೂಕಿನಲ್ಲಿ 41630 ಮಂದಿ ಇಕೆವೈಸಿ ಮಾಡಬೇಕಾಗಿದ್ದು ಅದರಲ್ಲಿ 29258 ಮಂದಿ ಮಾಡಿಕೊಂಡಿದ್ದಾರೆ. ಒಟ್ಟು ಶೇ.75 ಪ್ರಗತಿ ಸಾಧಿಸಲಾಗಿದೆ. ಅ.20 ಇಕೆವೈಸಿ ಗೆ ಕೊನೆಯ ದಿನ ಎಂದು ಅವರು ಮಾಹಿತಿ ನೀಡಿದರು.
ಚೀಲ ಯಾರಿಗೆ ?
“ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ತುಂಬಿರುವ ಚೀಲ ಯಾರಿಗೆ?” ಎಂದು ಅಧ್ಯಕ್ಷರು ಪ್ರಶ್ನಿಸಿದಾಗ, “ಚೀಲ ಸೊಸೈಟಿಯವರಿಗೆ. ಈ ಕುರಿತು ಆದೇಶ ಇದೆ. ಒಂದುಮನೆಗೆ 50ಕೆ.ಜಿ. ಅಕ್ಕಿಇದ್ದರೂ ಅದನ್ನು ಆ ಫಲಾನುಭವಿ ತರುವ ಚೀಲಕ್ಕೆ ಹಾಕಿ ಕೊಡಬೇಕಾಗಿತ್ತದೆ” ಎಂದವರು ಮಾಹಿತಿ ನೀಡಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ, ಶಕ್ತಿ ಯೋಜನೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪವಾದವು.







