ಐವರ್ನಾಡಿನ ಪ್ರವೀಣ್ ಕುಮಾರ್ ಪವಿತ್ರಮಜಲುರವರಿಗೆ ಹಿರಿಯರ ಕ್ರೀಡಾಕೂಟದಲ್ಲಿ ಪ್ರಶಸ್ತಿ

0

ದಕ್ಷಿಣ ಕನ್ನಡ ಮಾಸ್ಟರ್ಸ್‌ ಅಸೋಸಿಯೇಶನ್‌ ಮಂಗಳೂರು (ರಿ.) ವತಿಯಿಂದ ದಕ್ಷಿಣ ಕನ್ನಡ ಕೊಡಗು ಮತ್ತು ಉಡುಪಿ ಅಂತರ್‌ ಜಿಲ್ಲಾ ಮಟ್ಟದ 19ನೇ ಹಿರಿಯರ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.

ಐವರ್ನಾಡಿನ ಪ್ರವೀಣ್ ಕುಮಾರ್ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಹ್ಯಾಮ್ಮರ್‌ ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಮತ್ತು ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದು ದಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ನಿವೃತ್ತ ಮುಖ್ಯ ಅಧ್ಯಾಪಕ ದಿ. ದೇವಪ್ಪ ಗೌಡ ಪವಿತ್ರಮಜಲುರವರ ಪುತ್ರ.