ದೀಪಿಕಾ ಸುದರ್ಶನ್ ಅವರಿಗೆ ಸೋಮವಾರಪೇಟೆ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ

0

ಸೋಮವಾರಪೇಟೆ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಶ್ರೀಮತಿ ದೀಪಿಕಾ ಸುದರ್ಶನ್ ಕುಸುಬೂರು ಭಾಜನರಾಗಿದ್ದಾರೆ.

ಕಳೆದ 20 ವರ್ಷಗಳಿಂದ ಸೋಮವಾರಪೇಟೆಯ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶಕರಾಗಿದ್ದು, ಇವರ ಅತ್ತ್ಯುತ್ತಮ ಸೇವಾ ನಿಪ್ಠೆಯನ್ನು ಶ್ಲಾಘಿಸಿ ಸೆಪ್ಟೆಂಬರ್-2026 ರಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ .

ಶ್ರೀಮತಿ ದೀಪಿಕಾ ಸುದರ್ಶನ್ ರವರು ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ತೋಟ ದಿ.. ಪುಟ್ಟಣ್ಣ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರಿಯಾಗಿದ್ದು, ಸೋಮವಾರಪೇಟೆಯ, ಬೇಳೂರು ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಸುದರ್ಶನ್ ಕುಸುಬೂರು ರವರ ಧರ್ಮಪತ್ನಿ.