ಸಂಪಾಜೆ ಗ್ರಾ.ಪಂ. ಮಾಜಿ ಸದಸ್ಯೆ ನೀಲಮ್ಮ ಕೈಪಡ್ಕ ಹೃದಯಾಘಾತದಿಂದ ನಿಧನ

0

ದ.ಕ. ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿ ಬೀಡಿ ರಾಮಣ್ಣ ಮಣಿಯಾಣಿ ಅವರ ಧರ್ಮ ಪತ್ನಿ ಹಾಗೂ ಮಾಜಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನೀಲಮ್ಮ (58 ವಯಸ್ಸು) ಅವರು ಸೆ.30 ರಂದು ಹೃದಯಾಘಾತದಿಂದ ನಿಧನರಾದರು.

ರಾತ್ರಿ ವೇಳೆ ಮನೆಯಲ್ಲಿ ಮೃತರಿಗೆ ಎದೆ ನೋವು ಹಾಗೂ ಅಸ್ವಸ್ಥ ಕಾಣಿಸಿಕೊಂಡಿದ್ದು, ಕೂಡಲೇ ಮನೆಯವರು ಕಾರಿನ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟೀಕರಿಸಿದ್ದಾರೆ.

ಮೃತರು ಗಂಡ ರಾಮಣ್ಣ ಮಣಿಯಾಣಿ, ಮಕ್ಕಳಾದ ಶಾಲಿನಿ , ಶರತ್ ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಮೃತರ ಅಂತ್ಯ ಸಂಸ್ಕಾರ ಕೈಪಡ್ಕದ ಸ್ವಗೃಹದಲ್ಲಿ ನಡೆಯಲಿದೆ.