ಸುಳ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷ ದಾಸಪ್ಪ‌ ಪಲ್ಲತ್ತಡ್ಕ ನಿಧನ

0

ಸುಳ್ಯ ತಾಲೂಕು ಮೊಗೇರ ಸಂಘದ ಸ್ಥಾಪಕಾಧ್ಯಕ್ಷ, ಅಜ್ಜಾವರ ಗ್ರಾಮದ ಮೇನಾಲ – ಪಲ್ಲತ್ತಡ್ಕ ದಾಸಪ್ಪರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.29ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ‌ನಿಧನರಾದರು. ಅವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು.

ಕೆಲ ಸಮಯದಿಂದ ಅಸೌಖ್ಯದಿಂದಿದ್ದ ಅವರು ವಾರದ ಹಿಂದೆ ಸುಳ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ‌ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು‌ ಕೊನೆಯುಸಿರೆಳೆದರು.

ತಾಲೂಕು ಮೊಗೇರ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಅದರ ಅಧ್ಯಕ್ಷರಾಗಿಯೂ ಕೆಲಸ‌ ಮಾಡಿದ್ದರು. ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಒಂದು ಅವಧಿಗೆ ಸದಸ್ಯರಾಗಿದ್ದು, ಆ ಬಳಿಕ ಪಂಚಾಯತ್ ನಲ್ಲಿ ಬಿಲ್‌ಕಲೆಕ್ಟರ್ ಆಗಿಯೂ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ, ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದರು.

ಮೃತರು ತಾಯಿ ಸೀತು, ಪತ್ನಿ ಹೇಮಪ್ರಭಾ, ಪುತ್ರ ತಿಲಕ್ ರಾಜ್, ಪುತ್ರಿ ಧನುಶ್ರೀ, ಸಹೋದರರಾದ ಮನೋಹರ, ದಿವಾಕರ, ಕುಶಾಲಪ್ಪ, ಸಹೋದರಿ ಪದ್ಮಲತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.