ತ್ಯಾಜ್ಯ ಎಸೆಯುವಾಗ ವಾಹನ ಸಮೇತ ಹಿಡಿದುಕೊಟ್ಟ ಚರಣ್ ಬೇಂಗಮಲೆ














ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಸಂದರ್ಭದಲ್ಲಿ ಹಾಸನ ನಿವಾಸಿಗಳನ್ನು ತ್ಯಾಜ್ಯ ತುಂಬಿದ ವಾಹನ ಸಮೇತ ಗ್ರಾಮ ಪಂಚಾಯತ್ ಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿ.ಚಂದ್ರಲಿಂಗಂ ರವರ ಪುತ್ರ ಚರಣ್ ಬೇಂಗಮಲೆಯವರು ಹಿಡಿದುಕೊಟ್ಟಿದ್ದಾರೆ.
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಹಾಸನದ ಜೀವನ್ ರವರನ್ನು ತ್ಯಾಜ್ಯ ತುಂಬಿದ ಗಾಡಿಯ ಸಮೇತ ಚರಣ್ ಬೇಂಗಮಲೆರವರು ಹಿಡಿದುಕೊಂಡು ಗ್ರಾಮ ಪಂಚಾಯತ್ಗೆ ಕರೆಮಾಡಿದ್ದು ತ್ಯಾಜ್ಯ ಎಸೆದವರವರಿಗೆ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ರೂ 7000.00 ದಂಡ ವಿಧಿಸಿ ಇನ್ನೂ ಎಲ್ಲಿಯೂ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ಕೊಟ್ಟು ವಾಹನ ಬಿಟ್ಟು ಕಳುಹಿಸಿಕೊಡಲಾಯಿತು. ಹಾಗೂ ತ್ಯಾಜ್ಯ ಎಸೆದವರನ್ನು ಹಿಡಿದುಕೊಟ್ಟ ಚರಣ್ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ 500 ರೂ ಪ್ರೋತ್ಸಾಹಕ ಬಹುಮಾನವಾಗಿ ನೀಡಲಾಯಿತು. ತ್ಯಾಜ್ಯ ಎಸೆಯುತ್ತಿದ್ದ ವಾಹನವನ್ನು ತಡೆದು ಪ್ರಕರಣವನ್ನು ಇತ್ಯರ್ಥಪಡಿಸಲು ಸಹಕರಿಸಿದ ಬಾಂಜಿಕೋಡಿ ಮತ್ತು ಬೇಂಗಮಲೆ ಪರಿಸರದ ಸಾರ್ವಜನಿಕರಿಗೆ ಗ್ರಾಮಪಂಚಾಯತ್ ಅಭಿನಂದನೆಯನ್ನು ಸಲ್ಲಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ತ್ಯಾಜ್ಯ ಎಸೆಯುವ ಪ್ರಕರಣಗಳನ್ನು ಸಾರ್ವಜನಿಕರೇ ಹಿಡಿದು ಕ್ರಮಕ್ಕೆ ಆಗ್ರಹಿಸುವ ಹೆಜ್ಜೆಯು ಸ್ವಚ್ಛತಾ ಜಾಗೃತಿಗೆ ಬಹಳ ಪ್ರೇರಣಾದಾಯಕವಾಗಿದ್ದು ನೈರ್ಮಲ್ಯ ಕಾಪಾಡಲು ತುಂಬಾ ಸಹಕಾರಿ ಎಂದು ಗ್ರಾಮ ಪಂಚಾಯತ್ ಅಭಿಪ್ರಾಯಪಟ್ಟಿದೆ.







