













ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಕಜೆಮೂಲೆ ಕುಶಾಲಪ್ಪ ನಾಯ್ಕ ಮತ್ತು ಗೀತಾಕುಮಾರಿ ದಂಪತಿಯ ಪುತ್ರ, ಅಜ್ಜನಗದ್ದೆ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ಹೃದಯಸಂಬಂಧಿ ಕಾಯಿಲೆಯಿಂದಾಗಿ ಅ.3 ರಂದು ನಿಧನರಾದರು. ಅವರಿಗೆ 13 ವರ್ಷ ವಯಸ್ಸಾಗಿತ್ತು.
ಕಳೆದ ಒಂದು ತಿಂಗಳಿನಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಒಳಗಾದ ಮೋಕ್ಷಿತ್ ಆಗಾಗ ರಕ್ತ ವಾಂತಿ ಮಾಡುತ್ತಿದ್ದನು.ಮನೆಯವರು ಚಿಕಿತ್ಸೆಗಾಗಿ ಮಂಗಳೂರು, ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತಿದ್ದರು.
ಅ.3 ರಂದು ತೀವ್ರ ಅಸೌಖ್ಯಕ್ಕೆ ಒಳಗಾದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು.
ಮೃತ ದೇಹವನ್ನು ಮುಂಡಕಜೆಯ ಅಜ್ಜನ ಮನೆಗೆ ಕೊಂಡೊಯ್ದು ಅಂತಿಮ ಕಾರ್ಯ ನಡೆಸಲಾಯಿತು.
ಮೋಕ್ಷಿತ್ ಅಪ್ಪ- ಅಮ್ಮ, ಸಹೋದರ ಜಿತೇಶ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.







