ಮುಡ್ನೂರು ಮರ್ಕಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಂಚಿನ ಚಾವಣಿಗೆ ತೆಂಗಿನ ಮರ ಬಿದ್ದು ಹಾನಿ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜದ ಹಂಚಿನ ಚಾವಣಿಗೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ಅ. 1ರಂದು ವರದಿಯಾಗಿದೆ.

ಅ. 1ರಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಶಾಲೆಯ ಎದುರು ಇದ್ದ ತೆಂಗಿನ ಮರವೊಂದು ಮುರಿದು ಶಾಲೆಯ ಮೇಲೆ ಬಿದ್ದಿದೆ. ಪರಿಣಾಮ ತರಗತಿ ಕೊಠಡಿಯ ಮುಂಭಾಗದ ಹಂಚು ಮತ್ತು ಮೇಲ್ಚಾವಣಿ ಹಾನಿಯಾಗಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಶಾಲೆಯಿಂದ ಹೋಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.