ಮಾಂಡೋವಿ ಮೋಟಾರ್ಸ್‌ ವತಿಯಿಂದ ಆಯುಧ ಪೂಜಾ ಪ್ರಯುಕ್ತ ಕ್ರೀಡಾಕೂಟ

0

ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಸುಳ್ಯದ ಮಾಂಡೋವಿ ಮೋಟಾರ್ಸ್‌ ವತಿಯಿಂದ ಆಯುಧ ಪೂಜೆಯ ಪ್ರಯುಕ್ತ 43 ನೇ ವರ್ಷದ ಸಂಭ್ರಾಮಾಚರಣೆ ಕ್ರೀಡಾಕೂಟ, ಕ್ರಿಕೆಟ್‌ ಪಂದ್ಯಾಟ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವು ಅ.2 ರಂದು ಸುಳ್ಯದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಿತು.

ಬೆಳಿಗ್ಗೆ ಸುಳ್ಯದ ಕುಂಭಕ್ಕೋಡು ಅಚ್ಚುತ ಭಟ್‌ ಕಲಾಮಂದಿರದ ಮಾಲಕರಾದ ಶ್ರೀಮತಿ ಶಶಿಕಲಾ ಶುಭಕರ ರಾವ್‌ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಾಂಡೋವಿ ಮೋಟಾರ್ಸ್‌ ನ , ಡಿಜಿಎಂ ಚಂದ್ರಶೇಖರ್‌ ಕೆ. ಸನಿಲ್‌, ಕಾರ್ಯಕ್ರಮ ಆಯೋಜಕರಾದ ಸೀನಿಯರ್‌ ಸರ್ವಿಸ್‌ ಅಡ್ವೈಸರ್‌ ದುರ್ಗಾದಾಸ್‌ ಕಡ್ಲಾರು, ಸೀನಿಯರ್‌ ಅರವಿಂದ್‌ ಅಡ್ಕಾರ್‌ ಸೀನಿಯರ್‌ ಪೈಂಟರ್‌ ಕಿರಣ್‌ ಕೆ., ವಾಶಿಂಗ್‌ ಸೂಪರ್‌ ವೈಸರ್‌ ಧನಂಜಯ ಕುಮಾರ್‌ ಉಪಸ್ಥಿತರಿದ್ದರು. ಮಾಂಡೋವಿ ಸಿಬ್ಬಂದಿಗಳಾದ ಧನ್ಯಶ್ರೀ ಮತ್ತು ಹವ್ಯ ರವರ ಪ್ರಾರ್ಥಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಳ್ಯ ಸುದ್ದಿ ಚಾನೆಲ್‌ ಮುಖ್ಯಸ್ಥ ದುರ್ಗಾ ಕುಮಾರ್‌ ನಾಯರ್‌ಕೆರೆ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮ ಆಯೋಜಕರಾದ ವಾರೆಂಟಿ ಇನ್‌ ಚಾರ್ಜ್‌ ಅಮಿತ್‌ ಕುಮಾರ್‌, ಪಂದ್ಯಾಟದ ನಿರ್ಣಾಯಕರಾದ ಯತೀಂದ್ರ ಅಡ್ಕಾರ್‌, ದೇವಿಪ್ರಸಾದ್‌ ಪಂಜ ಉಪಸ್ಥಿತರಿದ್ದರು. ದುರ್ಗಾದಾಸ್‌ ಕಡ್ಲಾರು ಸ್ವಾಗತಿಸಿ ಅಮಿತ್ ಕುಮಾರ್ ವಂದಿಸಿದರು. ರಮೇಶ್‌ ಬೆಳ್ಳಾರೆ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.

ಕ್ರೀಡಾಕೂಟದಲ್ಲಿ 6 ತಂಡಗಳ ಲೀಗ್‌ ಮಾದರಿಯ ನಿಗದಿತ ಓವರ್‌ ಗಳ ಕ್ರಿಕೆಟ್‌ ಪಂದ್ಯಾಟ ನಡೆಯಿತು. ಮಹಿಳಾ ಸಿಬ್ಬಂದಿ ವರ್ಗ ದವರಿಗೆ ವಿಶೇಷ ಸ್ಪರ್ಧೆ ನಡೆಸಲಾಯಿತು.
ಕ್ರಿಕೇಟ್‌ ಪಂದ್ಯಾಟದಲ್ಲಿ ಅರೇನಾ ಸ್ಟ್ರೈಕರ್ಸ್‌ ಪ್ರಥಮ ಸ್ಥಾನವನ್ನು, ವಿಟಾರ ವಿಕ್ಟರ್ಸ್‌ ದ್ವಿತೀಯ ಸ್ಥಾನವನ್ನು ಮಾಂಡೋವಿ ಡೇರ್‌ ಡೆವಿಲ್ಸ್‌ ತೃತೀಯ ಸ್ಥಾನವನ್ನು ಪಡೆಯಿತು.