













ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಜಾಲ್ಸೂರಿನ ಗ್ರಾಮದ ವೆಂಕಟೇಶ್ ನಡುಬೆಟ್ಟು ರವರು ಭಾಗವಹಿಸಿ 2 ಚಿನ್ನದ ಪದಕ ಹಾಗೂ 1 ಬೆಳ್ಳಿಯ ಪದಕಗಳಿಸಿದ್ದಾರೆ.
5000 ಮೀಟರ್ ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ, ಹ್ಯಾಮರ್ ಥ್ರೋ ನಲ್ಲಿ ಪ್ರಥಮ ಸ್ಥಾನ, ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಸ್ಥಾನ ಪಡೆದು ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.







