













ಬೆಳಕು ಸಾಹಿತ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ 126 ನೆಯ ಕಾರ್ಯಕ್ರಮವಾದ “ಚಿಗುರು ಮಹಾ ಸಮ್ಮೇಳನ – 2026” ಸಮಾರಂಭವು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಜರುಗಿದ ಸಂದರ್ಭದಲ್ಲಿ ಕವಿಗೋಷ್ಠಿಯ ಅತಿಥಿಯಾಗಿ ಉಪಸ್ಥಿತರಾಗಿದ್ದ ಜ್ಯೋತಿಷಿ ಸಾಹಿತಿ ನಿರ್ದೇಶಕರಾಗಿದ್ದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿ ಗೌಡ, ಹಿರಿಯ ಸಾಹಿತಿ ಹರಿನರಸಿಂಹ ಉಪಾಧ್ಯಾಯ, ಮಹಿಳಾ ಸಾಹಿತಿ ಬಸ್ಸಮ್ಮ ಹಿರೇಮಠ ಮತ್ತು ಕವಿ, ಕಾರ್ಯದರ್ಶಿ ಎ ಎಸ್ ಕೆ ಸ್ವಾಮಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.







