ಹಾಡಿಕಲ್ಲು ಚಂದ್ರಶೇಖರ ಗೌಡರಿಗೆ ನುಡಿನಮನ

0

ಸೆ.17ರಂದು ನಿಧನರಾದ ಹಾಡಿಕಲ್ಲು ಚಂದ್ರಶೇಖರ ಗೌಡರ ಉತ್ತರಕ್ರಿಯಾ ಸದ್ಗತಿ ಕಾರ್ಯಕ್ರಮ ಮತ್ತು ನುಡಿನಮನ ಕಾರ್ಯಕ್ರಮವು ಅ.2ರಂದು ಮೃತರ ಮನೆಯಲ್ಲಿ ನೆರವೇರಿತು.

ಸುಳ್ಯ ಎ.ಪಿ.ಎಂ.ಸಿ. ಯ ಮಾಜಿ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಮುಳುಗಾಡು, ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ್ ಅವರು ನುಡಿನಮನ ಸಲ್ಲಿಸಿ ಚಂದ್ರಶೇಖರ ಗೌಡರ ಶ್ರಮ ಜೀವನ ಹಾಗೂ ಸಾರ್ಥಕ ಬದುಕಿನ ಕುರಿತು ಮಾತನಾಡಿದರು.

ಮೃತರ ಪತ್ನಿ ಚಂದ್ರಾವತಿ ಹಾಡಿಕಲ್ಲು, ಪುತ್ರರಾದ ಕಾರ್ತಿಕ್‌ ಹಾಡಿಕಲ್ಲು, ಪುತ್ರಿಯರಾದ ಶ್ರೀಮತಿ ಜಯಂತಿ ಪರಮೇಶ್ವರ, ಶ್ರೀಮತಿ ಮಮತ ನವೀನ್‌, ಶ್ರೀಮತಿ ಭವ್ಯ ರೋಹಿತ್‌, ಶ್ರೀಮತಿ ಸುಮಿತ್ರ ಅರುಣ್‌, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.