ಚೆಂಬು: ಸಂಪರ್ಕ ಕಡಿತದ ಭೀತಿಯಲ್ಲಿ ಪೆತ್ತಾಜೆ – ಬಾಲಂಬಿ ರಸ್ತೆ

0

ಕೊಡಗು ಜಿಲ್ಲೆಯ ಚೆಂಬು ಗ್ರಾಮ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು ಗ್ರಾಮಗಳನ್ನು ಸಂಪರ್ಕಿಸುವ ಬಾಲಂಬಿ- ಪೆತ್ತಾಜೆ ಗ್ರಾಮ ಸಡಕ್ ರಸ್ತೆಯ ಕೂಡಡ್ಕ ಹತ್ತಿರ ಕೆಲ್ಸಿಕಾನ ಎಂಬಲ್ಲಿ ಹೊಳೆಗೆ ಸುಮಾರು ೩೫ ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯ ಇಕ್ಕೆಲಗಳಲ್ಲಿ ಮಳೆಯ ನೀರು ಹರಿಯುವಿಕೆ ಕಾರಣ ಕುಸಿಯುವ ಸಾಧ್ಯತೆ ಹೆಚ್ಚಿದೆ.
ಗ್ರಾಮ ಸಡಕ್ ರಸ್ತೆಯನ್ನು ನಿರ್ಮಾಣಕಾರ್ಯ ಮಾಡುವ ಸಂದರ್ಭ ಈ ಕಿರಿದಾದ ಸೇತುವೆಯನ್ನು ಯಥಾ ಸ್ಥಿತಿಯಲ್ಲಿಯೇ ಮುಂದುವರಿಸಿದ ಕಾರಣ ಅಗಲವಾದ ರಸ್ತೆಯಲ್ಲಿ ಬಿದ್ದ ಮಳೆನೀರು ಮತ್ತು ಚರಂಡಿಯ ನಿರ್ವಹಣಾ ದೋಷದಿಂದಾಗಿ ಸೇತುವೆಯ ಇಕ್ಕೆಲಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುವಿಕೆ ಕಾರಣ ಎರಡು ಬದಿಯ ಮಣ್ಣು ಮತ್ತು ಕಟ್ಟಿದ ಕಲ್ಲುಗಳು ಕುಸಿಯಲು ಆರಂಭವಾಗಿದೆ. ಇದೇ ರೀತಿಯಲ್ಲಿ ಮುಂದುವರಿದರೆ ಮುಂದೊಂದು ದಿನ ಬಾಲೆಂಬಿ – ಪೆತ್ತಾಜೆ ರಸ್ತೆಯು ಸಂಪರ್ಕ ಕಡಿತವಾಗುವ ಸಾಧ್ಯತೆಯೂ ಇದ್ದು ಈಗಲೇ ಜಾಗ್ರತೆ ಮಾಡುವುದು ಒಳ್ಳೆಯದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.