













ಅಮರಮುಡ್ನೂರು ಗ್ರಾಮದ ಕುಕ್ಕುಜೆ ವೆಂಕಪ್ಪ ಗೌಡರು ಹೃದಯಾಘಾತದಿಂದ ಅ.5ರಂದು ಮುಂಜಾನೆ ನಿಧನರಾದರು. ಅವರಿಗೆ ಸುಮಾರು 66 ವರ್ಷ ವಯಸ್ಸಾಗಿತ್ತು.
ವೆಂಕಪ್ಪ ಗೌಡರು ಬೆಳಗ್ಗೆ ಕುಕ್ಕುಜಡ್ಕ ಬ್ಯಾಂಕ್ ಗೆ ಬಂದಿದ್ದರು. ಈ ವೇಳೆ ಅವರು ಅಲ್ಲಿ ಕುಸಿದು ಬಿದ್ದರೆನ್ನಲಾಗಿದೆ. ಬಳಿಕ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಆ ವೇಳೆಗೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಮಗ ನಳಿನ ಕುಮಾರ್, ಪುತ್ರಿ
ಲತಾ ಕೌಶಿಕ್ ಗೌಡರಮನೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







