ಪಂಜ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾ

0

ರಾಷ್ಟ್ರೀಯ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥವನ್ನು ಅ.5 ರಂದು ಕೈಗೊಳ್ಳಲಾಯಿತು.
ಪಂಜ ವಲಯ ಅರಣ್ಯ ಅಧಿಕಾರಿ ಸಂಧ್ಯಾ ರವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಫಾರೆಸ್ಟ್ ಗಾರ್ಡ್, ವಾಚರ್ ಗಳನ್ನು ಒಳಗೊಂಡ ಸುಮಾರು 30ಕ್ಕೂ ಮಿಕ್ಕಿ ಅಧಿಕಾರಿ ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡರು. ಪಂಜದಿಂದ ಜೀಪ್ ಹಾಗೂ ಬೈಕುಗಳಲ್ಲಿ ಆರಂಭವಾದ ಜಾಥ ಏನೆಕಲ್ಲು, ಸುಬ್ರಹ್ಮಣ್ಯ, ಗುತ್ತಿಗಾರು, ದೊಡ್ಡತೋಟವಾಗಿ ಅಯ್ಯನಕಟ್ಟೆ, ನಿಂತಿಕಲ್ಲು, ಎಡಮಂಗಲ, ಕಡಬ, ಆಲಂಕಾರು, ನೆಲ್ಯಾಡಿ, ಕಡಬ ಮಾರ್ಗವಾಗಿ ಪಂಜ ತಲುಪಳಿರುವುದಾಗಿ ತಿಳಿದುಬಂದಿದೆ. ಜಾಥದಲ್ಲಿ ದಾರಿ ಯುದ್ಧಕ್ಕೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂಥ ಘೋಷಣೆಗಳನ್ನು ಹಾಗೂ ಉದ್ಘೋಷಣೆಗಳನ್ನು ಮಾಡಿರುತ್ತಾರೆ.