ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್‌ಶಿಪ್ : ಬಿಪಿಸಿಎಲ್ ಮುಂಬೈ -ಚಾಂಪಿಯನ್ , ಫ್ರೆಂಡ್ಸ್ ಬ್ರದರ್ಸ್ ಕಡಬ – ರನ್ನರ್

0

ಸುಳ್ಯ ತಾಲೂಕು ಧ್ವನಿ ಬೆಳಕು , ಶಾಮಿಯಾನ,ಡೆಕೊರೆಶನ್ ಮಾಲಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಬಿಪಿಸಿಎಲ್ ಮುಂಬೈ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್‌ನಲ್ಲಿ ಬಿಪಿಸಿಎಲ್ ಮುಂಬೈ ತಂಡವು ಫ್ರೆಂಡ್ಸ್ ಕ್ಲಬ್ ಕಡಬ ತಂಡವನ್ನು 10 ಅಂಕಗಳ ಅಂತರದಲ್ಲಿ ಮಣಿಸಿತು. ಬಿಪಿಸಿಎಲ್ ಮುಂಬಯಿ ತಂಡ 34 ಗಳಿಸಿದರೆ ಫ್ರೆಂಡ್ಸ್ ಬ್ರದರ್ಸ್ ಕಡಬ ತಂಡ 24 ಅಂಕ ಗಳಿಸಿ ಪರಾಭವಗೊಂಡರು ಬಿಪಿಸಿಎಲ್ ಮುಂಬಯಿ ತಂಡಕ್ಕೆ ಪ್ರಥಮ ಬಹುಮಾನ 1 ಲಕ್ಷ, ರನ್ನರ್ಸ್ ತಂಡ ಫ್ರೆಂಡ್ಸ್ ಕ್ಲಬ್ ಕಡಬ 70 ಸಾವಿರ ಹಾಗು ಟ್ರೋಫಿ ಪಡೆದುಕೊಂಡಿತು. ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಮುಂಬೈ ಪೋರ್ಟ್ ಹಾಗು ಸದರ್ನ್ ರೈಲ್ವೇ ತಂಡಗಳು ತಲಾ 35 ಸಾವಿರ ಹಾಗು ಟ್ರೋಫಿ ಪಡೆದುಕೊಂಡಿತು.
ಕಾರ್ಯಕ್ರಮ ಕೊನೆಯಲ್ಲಿ ಸಂಘ ಪಂದ್ಯಾಟದ ಸಹಾಯಾರ್ಥ ಆಯೋಜಿಸಿದ ಅದೃಷ್ಟ ಚಿಟಿ ಯೋಜನೆಯ ಡ್ರಾ ಫಲಿತಾಂಶ ನಡೆಯಿತು.
ಪಂದ್ಯಾಟದ ಯಶಸ್ವಿಗೆ
ನೇತೃತ್ವ ವಹಿಸಿದ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಜಿ.ಪಿ.ಸಂಶುದ್ದೀನ್ ಹಾಗೂ ಸಹಕರಿಸಿದವನ್ನೂ ಗೌರವಿಸಲಾಯಿತು.