ಐವರ್ನಾಡು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕರುಣಾಕರ ಉದ್ದಂಪಾಡಿ ನಿಧನ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಐವರ್ನಾಡು ಗ್ರಾಮದ ಉದ್ದಂಪಾಡಿ ಕರುಣಾಕರರವರು ಅ.06 ರಂದು ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 57 ವರ್ಷ ಪ್ರಾಯವಾಗಿತ್ತು.
ಮೃತರು ತಾಯಿ ಶ್ರೀಮತಿ ಸರಸ್ವತಿ ,ಪತ್ನಿ ಶ್ರೀಮತಿ ಅಶ್ವಿನಿ ಎಂ, ಪುತ್ರರಾದ ಸಚಿನ್ ,ಚೇತನ್,ಪ್ರತೀಕ್ ,ಸಹೋದರಿ,ಸಹೋದರರು,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.