ತೊಡಿಕಾನ : ಆನೆ ದಾಳಿ – ಅಪಾರ ಕೃಷಿ ಹಾನಿ

0

ತೊಡಿಕಾನ ಗ್ರಾಮದ ಮರ್ಪಂಗಲ್ಲಿನ ಅಮೆಮನೆ ಶ್ರೀಮತಿ ಸೋಜಾವತಿ ವೆಂಕಟರಮಣ ಗೌಡರ ತೋಟಗಳಿಗೆ ಆನೆ ದಾಳಿ ನಡೆಸಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಅ. 5 ರಂದು ವರದಿಯಾಗಿದೆ.

ಆನೆ ದಾಳಿಯಲ್ಲಿ ತೆಂಗಿನ ಮರಗಳು, ಬಾಳೆ ಗಿಡಗಳು, ಅಡಿಕೆ ಮರಗಳಿಗೆ ಅಪಾರ ಹಾನಿ ಮಾಡಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಆನೆ ಟಾಸ್ಕ್ ಫೋರ್ಸ್ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.