













ತೊಡಿಕಾನ ಗ್ರಾಮದ ಮರ್ಪಂಗಲ್ಲಿನ ಅಮೆಮನೆ ಶ್ರೀಮತಿ ಸೋಜಾವತಿ ವೆಂಕಟರಮಣ ಗೌಡರ ತೋಟಗಳಿಗೆ ಆನೆ ದಾಳಿ ನಡೆಸಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಅ. 5 ರಂದು ವರದಿಯಾಗಿದೆ.
ಆನೆ ದಾಳಿಯಲ್ಲಿ ತೆಂಗಿನ ಮರಗಳು, ಬಾಳೆ ಗಿಡಗಳು, ಅಡಿಕೆ ಮರಗಳಿಗೆ ಅಪಾರ ಹಾನಿ ಮಾಡಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಆನೆ ಟಾಸ್ಕ್ ಫೋರ್ಸ್ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







