ಅಮರಪಡ್ನೂರು : ಭೀಕರ ಗಾಳಿ ಮಳೆಗೆ ತೆಂಗಿನ‌‌ ಮರ ಮುರಿದು‌ ವಿದ್ಯುತ್ ಕಂಬಕ್ಕೆ ಬಿದ್ದು ಹಾನಿ

0

ಅಮರಪಡ್ನೂರು ಗ್ರಾಮದಲ್ಲಿ ಇಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ತೆಂಗಿನ ಮರ ಮುರಿದು ವಿದ್ಯುತ್ ಸ್ಟೇ ವಯರ್ ಗೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಕೂಡ ಮುರಿದು ಬಿದ್ದ ಘಟನೆ ನಡೆದಿದೆ.
ಕರ್ಮಜೆ ನೇಣಾರು ಶ್ರೀಧರ ಎಂಬವರ ನಿರ್ಮಾಣ ಹಂತದ ಮನೆಯ ಸಮೀಪವಿದ್ದ ತೆಂಗಿನ ಮರ ಭಾರೀ ಗಾಳಿಗೆ ಮುರಿದು ವಿದ್ಯುತ್ ಕಂಬಕ್ಕೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಬುಡದಿಂದಲೇ ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.
ತೋಟದ ಕಡೆ ಬಿದ್ದ ಪರಿಣಾಮ ಅಡಿಕೆ ಮರಗಳಿಗೆ ಹಾನಿಯಾಗಿದ್ದು
ನಿರ್ಮಾಣ ಹಂತದ ಮನೆ ಕಡೆಗೆ ತೆಂಗಿನ ಮರ ಬಿದ್ದಿರುತ್ತಿದ್ದರೆ ಅಪಾರ ಹಾನಿ ಸಂಭವಿಸುತ್ತಿತ್ತೆನ್ನಲಾಗಿದೆ.